ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ 'ಗಿಫ್ಟ್ ಪಾಲಿಟಿಕ್ಸ್' : ಸೀರೆಗಾಗಿ ಮುಗಿಬಿದ್ದ ನಾರಿಯರು

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ 'ಗಿಫ್ಟ್ ಪಾಲಿಟಿಕ್ಸ್' : ಸೀರೆಗಾಗಿ ಮುಗಿಬಿದ್ದ ನಾರಿಯರು

ಚಿಕ್ಕಬಳ್ಳಾಪುರ : ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮತದಾರರಿಗೆ ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಗಿಫ್ಟ್ ನೀಡಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಮಾಡುತ್ತಿದೆ.

ಇದೀಗ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುಖಂಡ ನಾರಿಯರಿಗೆ ಸೀರೆ ಹಂಚಿ , ಬಾಟೂಟ ಹಾಕಿಸಿ ತನ್ನ ಶಕ್ತಿ ಪ್ರದರ್ಶನ ಮೆರೆದಿದ್ದಾರೆ.

ಹೌದು ಚಿಕ್ಕಬಳ್ಳಾಪುರ) ತಾಲೂಕಿನ ಗೆಂಟಿಗನಾಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಸಚಿವ ಕೆ.ಸುಧಾಕರ್ ಬೆಂಬಲಿಗ ಶಿವಕುಮಾರ್ ಸಾವಿರಾರು ಮಹಿಳೆಯರನ್ನು ಸೇರಿಸಿ ನಾರಿಯರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ. ಸಾವಿರಾರು ಮಹಿಳೆಯರಿಗೆ ಕಲರ್ ಕಲರ್ ಸೀರೆ ನೀಡಿ ಬಾಡೂಟ ಹಾಕಿಸಿದ್ದಾರೆ. ಸೀರೆ ಪಡೆಯಲು ಗ್ರಾಮದಲ್ಲಿ ಮಹಿಳೆಯರು ಮುಗಿಬಿದ್ದಿದ್ದು, ನೂಕು ನುಗ್ಗಲು ಉಂಟಾಗಿತ್ತು.