ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ಪತಿ ಇನ್ನಿಲ್ಲ
ಪುಣೆ: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್ Former President Pratibha Devi Singh Patil)
ಪಾಟೀಲ್ ಅವರ ಪತಿ ದೇವಿಸಿಂಗ್ ರಣಸಿಂಗ್ ಪಾಟೀಲ್ (Devisingh Ransingh Patil) ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಫೆ.12 ರಂದು ತನ್ನ ಪುಣೆಯ ನಿವಾಸದಲ್ಲಿ ಹುಲ್ಮಾಲುಹಾಸಿನ ಮೇಲೆ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದರು. ಬಿಪಿ, ಕಿಡ್ನಿ ವೈಫಲ್ಯ ಮುಂತಾದ ಸಮಸ್ಯೆಗಳಿಂದ ನಿಧನಹೊಂದಿದ್ದಾರೆಂದು ಆಸ್ಪತ್ರೆ ಮಾಹಿತಿ ವರದಿಯಾಗಿದೆ
ದೇವಿಸಿಂಗ್ ರಣಸಿಂಗ್ ಪಾಟೀಲ್ ಅವರಿಗೆ 88 ವರ್ಷ ವಯಸ್ಸಾಗಿತ್ತು, ಪತ್ನಿ ಪ್ರತಿಭಾ ದೇವಿ ಸಿಂಗ್ ಪಾಟೀಲ್, ಪುತ್ರ, ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್ ಶೆಖಾವತ್ ಸೇರಿದಂತೆ ಕುಟುಂಬಸ್ಥರು ಅಗಲಿದ್ದಾರೆ.