ಮಾನವೀಯತೆಯ ಸೌಲಭ್ಯ ಕಲ್ಪಸಿ- ಪತ್ರಿಕಾ ವಿತರಕ ನಾಗರಾಜ್ ಕುಲಕರ್ಣಿ

ಮಾನವೀಯತೆಯ ಸೌಲಭ್ಯ ಕಲ್ಪಸಿ- ಪತ್ರಿಕಾ ವಿತರಕ ನಾಗರಾಜ್ ಕುಲಕರ್ಣಿ
ಧಾರವಾಡ: ಕೊರೊನಾ ಸಂಕಷ್ಟದ ದಿನಗಳಲ್ಲಿ ಪತ್ರಿಕೆಯ ಪ್ರಸರಣ ಹಾಗೂ ಪತ್ರಿಕೆ ಹಂಚುವುದು ಇನ್ನೂ ಹೆಚ್ಚಿನ ತರಹದ ಕಷ್ಟಗಳನ್ನು ಅನುಭವಿಸಿದ್ದು, ಅಸಂಘಟಿತ ವಲಯವೆಂದು ಗುರುತಿಸಿ ಸಹಾಯ ಮಾಡಿ ಎಂದು ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯಮಂತ್ರಿ ಯವರಿಗೆ ಪತ್ರಿಕಾ ವಿತರಕರ ಅಧ್ಯಕ್ಷ ಶಿವು ಹಲಗಿ ಮನವಿ ಸಲ್ಲಿಸಿದರು.
ನಗರದಲ್ಲಿ ಪತ್ರಿಕಾ ವಿತರಕರು ಕಳೆದ ೧೦ ಫೆಬ್ರವರಿ ೨೦೨೧ ರಂದು ಕೊಟ್ಟ ಮನವಿಗೆ ಸರಕಾರದಿಂದ ವಿತರಕರು ಸಂಘಟಿತ ವಲಯದಲ್ಲಿ ಬರುವುದಿಲ್ಲವೆಂದು ತಿಳಿಸಿದ ಪ್ರಕಟಣೆಗೆ ಬೇಸರ ವ್ಯಕ್ತ ಪಡಿಸಿ ಮಾತನಾಡಿದ ನಾಗರಾಜ ಕುಲಕರ್ಣಿ ನಮಗೆ ಸಂಘಟಿತ ವಲಯವೆಂದು ಪರಿಗಣಿಸಲು ಆಗದಿದ್ದರೆ ಕನಿಷ್ಟಪಕ್ಷ ನಮ್ಮ ಪರಿಸ್ಥಿತಿಯನ್ನು ನೋಡಿ ಸಹಾಯ ಮಾಡಿ ಎಂದು ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಮಾಡಿದ್ದು, ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಎಲ್ಲಾ ವರ್ಗಗಳಿಗೆ ಸಹಾಯ ಮಾಡಿ ಪತ್ರಿಕಾ ವಿತರಕರನ್ನು ಮಾನವೀಯತೆ ಆಧಾರದ ಮೇಲೆ ಪರಿಗಣಿಸಿ ಎಂದು ಸರಕಾರಕ್ಕೆ ಮನವಿ ಮಾಡಿದರು. ಪತ್ರಿಕಾ ವಿತರಕರಾದ ಕೃಷ್ಣ ಕುಲಕರ್ಣಿ, ಸಂತೋಷ ರಾತೋಡ, ಮನೋಹರ, ಶಶಿಕಾಂತ ನೀಲಾಕರಿ, ಅಯೂಬ್, ಶ್ರೀಧರ್ ಪಾಸ್ತೆ, ನಾಯಕ್ ಉಪಸ್ಥಿತರಿದ್ದರು.