ಪ್ರಧಾನಿ ಮೋದಿ ಸಂಸತ್ನಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯಲಿ

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ತಿದ್ದುಪಡಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಮೂರು ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಾಪಸ್ ಪಡೆದಿರುವುದಾಗಿ ಘೋಷಿಸಿದ ಬೆನ್ನಲ್ಲೇ ರೈತ ಸಂಘಟನೆಗಳು ಸಂತಸ ವ್ಯಕ್ತಪಡಿಸಿದರು...ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಹಿತರಕ್ಷಣಾ ಪರಿವಾರದ ಸದಸ್ಯರು ಧಾರವಾಡದ ಅಂಬೇಡ್ಕರ್ ಮೂರ್ತಿ ಎದುರು ವಿಜಯೋತ್ಸವ ಆಚರಿಸಿದರು. ..ಪಟಾಕಿ ಸಿಡಿಸಿದ ರೈತರು, ಪ್ರಧಾನಿಗಳ ಘೋಷಣೆ ಅಲ್ಪ ಸಮಾಧಾನ ತಂದಿದೆ. ಆದರೆ, ಈ ಕಾಯ್ದೆಗಳನ್ನು ಸಂಸತ್ ಮೂಲಕ ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರಧಾನಿಗಳ ಘೋಷಣೆ ರೈತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮುಖಂಡರು ಹೇಳಿದರು.ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಧಾರವಾಡದಲ್ಲೂ ನಿರಂತರವಾಗಿ ಧರಣಿ ನಡೆಸಲಾಗಿತ್ತು. ರಾಷ್ಟ್ರಮಟ್ಟದ ರೈತ ಹೋರಾಟಗಾರ ರಾಕೇಶ್ಸಿಂಗ್ ಟಿಕಾಯತ್ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಆದರೆ, ಸಂಸತ್ನಲ್ಲಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದರು.