ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರಿಗೆ ತಾಲಿಬಾನಿಗಳಿಂದ ಏಟು

Afghanistan Journalists: ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸುವುದಾಗಿ ಈ ಗುಂಪು ಈ ಹಿಂದೆ ಹೇಳಿಕೊಂಡಿತ್ತು, ಆದರೆ ನಿನ್ನೆ ಮತ್ತು ಕಳೆದ ವಾರಗಳಲ್ಲಿ ಅದರ ಕ್ರಮಗಳು ಬೇರೆ ರೀತಿಯಲ್ಲಿ ಸೂಚಿಸುತ್ತವೆ. ಗುಂಪಿನ ವಕ್ತಾರರು ಈಗಾಗಲೇ ಪ್ರತಿಭಟನೆಯಲ್ಲಿ ಬೀದಿಗಿಳಿಯದಂತೆ ಜನರನ್ನು ಎಚ್ಚರಿಸಿದ್ದಾರೆ ಮತ್ತು ಪತ್ರಕರ್ತರು ಯಾವುದೇ ಪ್ರತಿಭಟನೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿ: ಅಫ್ಘಾನಿಸ್ತಾನದ ಮಹಿಳೆಯರ ಪ್ರತಿಭಟನೆಯನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರ ಮೇಲೆ ತಾಲಿಬಾನ್ ಹಲ್ಲೆ ನಡೆಸಿದೆ. ತಾಲಿಬಾನ್‌ನಿಂದ ಹಲ್ಲೆಗೊಳಗಾದ ಪತ್ರಕರ್ತರ ದೇಹದ ಚಿತ್ರಗಳು ಕಠಿಣ ಇಸ್ಲಾಮಿಸ್ಟ್ ಗುಂಪಿನ ಮೇಲೆ ಜಾಗತಿಕ ಕಾಳಜಿಯನ್ನು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ಭರವಸೆಯನ್ನು ಈಡೇರಿಸುವ ಸಾಮರ್ಥ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಪ್ರಶ್ನಿಸಿವೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಎಂದು ಘೋಷಿಸಿದ ನಂತರ ಅಲ್ಲಿ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯ ಬಗ್ಗೆ ಮಾರ್ಕಸ್ ಯಾಮ್ (ಲಾಸ್ ಏಂಜಲೀಸ್ ಟೈಮ್ಸ್ ನ ವಿದೇಶಿ ವರದಿಗಾರ) ಮತ್ತು ಎಟಿಲಾಟ್ರೋಜ್ (ಅಫ್ಘಾನ್ ಸುದ್ದಿಸಂಸ್ಥೆ) ಎಂಬ ಪತ್ರಕರ್ತರು ಗಾಯಗೊಂಡಿರುವ ಪತ್ರಕರ್ತರ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.
ಯಾಮ್ ಅವರು ಟ್ವೀಟ್ ಮಾಡಿರುವ ಚಿತ್ರಗಳಲ್ಲಿ ಇಬ್ಬರು ವ್ಯಕ್ತಿಗಳು ಒಳ ಉಡುಪುಗಳಲ್ಲಿದ್ದು ಕ್ಯಾಮರಾಕ್ಕೆ ಬೆನ್ನು ಹಾಕಿ