ರಸಗೊಬ್ಬರ ದರ ಭಾರಿ ಏರಿಕೆ
ಬೆಂಗಳೂರು: ಪ್ರತಿ ವರ್ಷ ಕಾರ್ಮಿಕರ ಕೂಲಿ, ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ದರ ಏರಿಕೆಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ರಸಗೊಬ್ಬರ ದರ ಇನ್ನಿಲ್ಲದಂತೆ ಏರಿಕೆ ಕಂಡಿದೆ. ಡಿಎಪಿ, ಯೂರಿಯಾ, ಪೊಟ್ಯಾಶಿಯಂ, ಎನ್.ಪಿ.ಕೆ. ಸೇರಿದಂತೆ ವಿವಿಧ ರೀತಿಯ ರಸಗೊಬ್ಬರಗಳ ದರ ಭಾರಿ ಏರಿಕೆ ಕಂಡಿದೆ. 50 ಕೆಜಿ ಚೀಲಕ್ಕೆ 50 ರಿಂದ 100 ರೂ.ವರೆಗೆ ಹೆಚ್ಚಳ ಮಾಡುತ್ತಿದ್ದ ಕಂಪನಿಗಳು ಈಗ ಶೇ.15 ರಿಂದ 25ರಷ್ಟು ದರ ಏರಿಕೆ ಮಾಡಿವೆ.