'ಉತ್ತರಕಾಂಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಿಎಂಟ್ರಿ..!

'ಉತ್ತರಕಾಂಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಿಎಂಟ್ರಿ..!

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ 'ಉತ್ತರಕಾಂಡ' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗಲಿರುವ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿರುವ ರಮ್ಯಾ 'ಇನ್ನಮ್ಯಾಗಿಂದ ಫುಲ್ ಗುದ್ದಾಂ ಗುದ್ದಿ'ಎಂದು ಹೇಳಿದ್ದಾರೆ.

ರತ್ನನ್ ಪ್ರಪಂಚ ಚಿತ್ರದಲ್ಲಿ ಅಭಿನಯಿಸಲು ಆಗಲಿಲ್ಲವೆಂದು ಬೇಸರವಿತ್ತು. ಈಗ 10 ವರ್ಷಗಳ ನಂತರ 'ಉತ್ತರಕಾಂಡ' ಚಿತ್ರದ ಮೂಲಕ ಮತ್ತೆ ಅದೇ ತಂಡದ ಜೊತೆಗೆ ಮನರಂಜಿಸಲು ಬರುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಥೆ ಸೂಪರಾಗಿದೆ, ಧನು, ಕಾರ್ತಿಕ್, ಯೋಗಿ ಎಲ್ಲರು ನನಗೆ ಗೊತ್ತಿರುವ ಅದ್ಭುತ ಕಲಾವಿದರು, ರೋಹಿತ ಪದಕಿ, ಅರವಿಂದ್ ಕಶ್ಯಪ್, ಚರಣ್ ರಾಜ್, ವಿಶ್ವಾಸ್, ದೀಪು ಈ ತಂಡದೊಂದಿಗೆ ಕೆಲಸ ಮಾಡಲು ಕಾತುರಳಾಗಿದ್ದೇನೆ ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ರಮ್ಯಾ ಹೇಳಿದ್ದಾರೆ. ಹೊಂಬಾಳೆಯ ಅಂಗಸಂಸ್ಥೆ ಕೆ.ಆರ್.ಜಿ. ಸಂಸ್ಥೆ ಚಿತ್ರವನ್ನು ನಿರ್ಮಿಸಲಿದ್ದು ಎಂಟು ವರ್ಷಗಳ ನಂತರ ತಮಗೆ ಇಷ್ಟವಾದ ಕಥೆ 'ಉತ್ತರಕಾಂಡ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೇನೆ ಎಂದು ರಮ್ಯಾ ಹೇಳಿದ್ದಾರೆ.

'ಉತ್ತರಕಾಂಡ' ಚಿತ್ರವು ಮನುಷ್ಯನ ವಿಚಿತ್ರ ಮನಸ್ಥಿತಿಯ ಹೋರಾಟವನ್ನು ಬಿಂಬಿಸುತ್ತದೆ. ಸರಿ ತಪ್ಪುಗಳ ಸಿದ್ಧಾಂತ, ಅಹಂಕಾರಗಳ ಗುದ್ದಾಟ ಉತ್ತರಕರ್ನಾಟಕದ ಬದುಕಿನ ಕಥೆ ಆಗಿರುವುದರಿಂದ ಇದೊಂದು ದೊಡ್ಡ ಸವಾಲು ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ. ಚಿತ್ರದಲ್ಲಿ ಸಂಪೂರ್ಣ ಉತ್ತರಕರ್ನಾಟಕದ ಸೊಗಡು ಕಾಣಿಸಲಿದ್ದು ಅಲ್ಲಿಯೇ ಚಿತ್ರೀಕರಣವಾಗಲಿದೆ.