ಮಗನ ಮದುವೆ ನಂತ್ರ ತಿಮ್ಮಪ್ಪನಿಗೆ ಹರಕೆ ತೀರಿಸಿದ ಪೊಲೀಸ್ ಕಮಿಷನರ್..! ತಿರುಪತಿಗೆ ತಿಮ್ಮಪ್ಪನಿಗೆ ಮುಡಿಕೊಟ್ಟ ಪ್ರತಾಪ್ ​ರೆಡ್ಡಿ.

ಮಗನ ಮದುವೆ ನಂತ್ರ ತಿಮ್ಮಪ್ಪನಿಗೆ ಹರಕೆ ತೀರಿಸಿದ ಪೊಲೀಸ್ ಕಮಿಷನರ್..! ತಿರುಪತಿಗೆ ತಿಮ್ಮಪ್ಪನಿಗೆ ಮುಡಿಕೊಟ್ಟ ಪ್ರತಾಪ್ ​ರೆಡ್ಡಿ.

ಬೆಂಗಳೂರು : ಪೊಲೀಸ್ ಕಮಿಷನರ್ ಪ್ರತಾಪ್​ ರೆಡ್ಡಿ ಅವರು ಮಗನ ಮದುವೆ ನಂತರ ತಿಮ್ಮಪ್ಪನಿಗೆ ಹರಕೆ ತೀರಿಸಿದ್ದು, ತಿರುಪತಿಗೆ ತಿಮ್ಮಪ್ಪನ ದರ್ಶನ ಪಡೆದು ತಲೆ ಮುಡಿಕೊಟ್ಟಿದ್ಧಾರೆ. ಕಳೆದ ವಾರ ಪ್ರತಾಪ್​ ರೆಡ್ಡಿ ಅವರು ಕುಟುಂಬ ಸಮೇತಾ ತಿರುಪತಿಗೆ ತೆರಳಿದ್ದರು.ಕಳೆದ ತಿಂಗಳು ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು, ಬೆಂಗಳೂರಿನ ಚಾಮರವಜ್ರ ಕನ್ ವೇನ್ಷನ್ ಹಾಲ್ ನಲ್ಲಿ ರಿಸಪ್ಷನ್ ಕೂಡ ನಡೆದಿತ್ತು. ಮಗನ ಮದುವೆ ನಂತರ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಹರಕೆ ತೀರಿಸಿದ್ಧಾರೆ. ತಲೆ ಮುಡಿ ನೀಡಿ ಹರಕೆ ತೀರಿಸಿ ತಿಮ್ಮಪ್ಪನ ದರ್ಶನ ಮಾಡಿ ವಾಪಸ್ ಆಗಿದ್ಧಾರೆ. ಪ್ರತಾಪರೆಡ್ಡಿ ಅವರು ಬೆಂಗಳೂರು ಪೊಲೀಸ್ ಕಮೀಷನರ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿದ್ಧಾರೆ.