ಕೋಟಿ ರೂ. ಸಂಬಳದ ಉದ್ಯೋಗ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಮುಂದಾದ ಯುವಕ

ಅಮೆರಿಕದಲ್ಲಿ ಉದ್ಯೋಗ, ಕೋಟಿ ರೂ. ಸಂಬಳ ಇದ್ದರೂ ಮಧ್ಯಪ್ರದೇಶದ ಮೂಲಕ ಪ್ರನ್ಸುಖ್ ಕಾಂತೇಡ್ ಎಂಬ 28ರ ಹರೆಯದ ಯುವಕ ಎಲ್ಲವನ್ನು ತೆಜಿಸಿ ಸನ್ಯಾಸತ್ವ ಸ್ವೀಕರಿಸುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾನೆ. ಪ್ರನ್ಸುಖ್ ಇಂಜನಿಯರಿಂಗ್ ಮುಗಿಸಿ ಅಮೆರಿಕಕ್ಕೆ ತೆರಳಿದ್ದ. ಅಲ್ಲಿ ಡೇಟಾ ಸೈನ್ಸ್‍ನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಉದ್ಯೋಗ ಸೇರಿಕೊಂಡ. ಆದರೆ ಇದ್ಯಾವುದೂ ಖುಷಿ ನೀಡದ ಹಿನ್ನೆಲೆ, ಭಾರತಕ್ಕೆ ಮರಳಿದ್ದು, ಇದೇ ಡಿ.26ರಂದು ಜೈನ ಮುನಿಗಳಿಂದ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದ್ದಾರೆ.