ಸ್ಯಾಂಡಲ್‌ವುಡ್ ಸ್ಟಾರ್ ನಟನ ಫಾರ್ಮ್ ಹೌಸ್‌ನಲ್ಲಿ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಬರ್ತ್ ಡೇ?!

ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ನಟನೊಬ್ಬ ತಮ್ಮ ಫಾರ್ಮ್ ಹೌಸ್‍ನಲ್ಲಿ ಮೊಸ್ಟ್ ವಾಟೆಂಡ್ ನಟೋರಿಯಸ್ ರೌಡಿ ಶೀಟರ್ ಸೈಕಲ್ ರವಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರಂತೆ.
ಇದು ನಾವು ಹೇಳ್ತಾ ಇರೋ ಮಾತಲ್ಲ,
ಉನ್ನತ ಮೂಲಗಳೇ ನೀಡಿರುವ ಪಕ್ಕಾ ಮಾಹಿತಿ ಇದು.
ರೌಡಿ ಶೀಟರ್ ಸೈಕಲ್ ರವಿ ಅನೇಕ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲಿಗೂ ಹೋಗಿ ಬಂದಿದ್ದಾನೆ. ಸದ್ಯ ಸ್ಯಾಂಡಲ್‍ವುಡ್‍ನ ಸ್ಟಾರ್ ನಟ ಈ ರೌಡಿ ರವಿಯ ಹುಟ್ಟುಹಬ್ಬ ಆಚರಿಸಿದ್ದಲ್ಲದೇ ಆತನೊಂದಿಗೆ ಕಂಠಪೂರ್ತಿ ಎಣ್ಣೆ ಇಳಿಸಿದ್ರಾ ಅನ್ನೋ ಅನುಮಾನ ಸಹ ಇದೆ. ಹೀಗಾಗಿ ಸೈಕಲ್ ರವಿ ಜೊತೆಗೆ ನಟನಿಗೆ ಇರುವ ಲಿಂಕ್ ಏನು? ಯಾಕಿಷ್ಟು ಕ್ಲೋಸ್ ಆಗಿದ್ದಾರೆ ಅನ್ನೋ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಸದ್ಯ ಪಾರ್ಟಿ ನಡೆದ ಮೈಸೂರಿನನ ಕಡೆ ಪೊಲೀಸರು ಮುಖ ಮಾಡಿದ್ದು, ತನಿಖೆ ಮಂದುವರೆಸಲಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.