ಮತಾಂತರವಾದರೆ ಮೂಲ ಮತದ ಹಕ್ಕು ಕಳೆದುಕೊಳ್ಳುತ್ತಾರೆ, ಈ ಕಾನೂನು ಹಿಂದಿನ ಸರ್ಕಾರದ ಶಿಶು: ಗೃಹ ಸಚಿವ

ಮತಾಂತರವಾದರೆ ಮೂಲ ಮತದ ಹಕ್ಕು ಕಳೆದುಕೊಳ್ಳುತ್ತಾರೆ, ಈ ಕಾನೂನು ಹಿಂದಿನ ಸರ್ಕಾರದ ಶಿಶು: ಗೃಹ ಸಚಿವ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಕಳೆದ ಮಂಗಳವಾರ ವಿಧಾನಸಭೆಯಲ್ಲಿ 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021' ಮಂಡನೆಯಾಗಿದೆ. ಈ ಬಗ್ಗೆ ಇಂದು ಗುರುವಾರ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ.

ಸರ್ಕಾರದ ಗೃಹ ಸಚಿವರು, ಕಾನೂನು ಸಂಸದೀಯ ವ್ಯವಹಾರಗಳ ಸಚಿವರು ವಿವರಣೆ ನೀಡಿದ್ದಾರೆ.

ಕಾಯಿದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕರು ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 14 ಸೆಕ್ಷನ್​ಗಳನ್ನು ಒಳಗೊಂಡ ವಿಧೇಯಕವನ್ನು ಮತಾಂತರ ನಿಷೇಧ ಕಾಯಿದೆ ಎಂದೂ ಕರೆಯಲಾಗುತ್ತದೆ. ಈ ವಿಧೇಯ ಏನು, ಅದರ ಸ್ವರೂಪವೇನು, ಹೇಗಿರುತ್ತದೆ, ಕಾನೂನು ಏನು ಹೇಳುತ್ತದೆ ಎಂದು ರಾಜ್ಯದ ಜನತೆಗೆ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಸದನದ ಕಲಾಪ ಬೆಳಗ್ಗೆ ಆರಂಭವಾಗುತ್ತಿದ್ದಂತೆ ಹೇಳಿದರು. ಗೃಹ ಸಚಿವರಾದ ಅಗರ ಜ್ಞಾನೇಂದ್ರ ಅವರು ವಿವರಣೆ ನೀಡುವಂತೆ ಕೇಳಿಕೊಂಡರು.

ಮತಾಂತರ ನಿಷೇಧ ಕಾಯಿದೆ ಏನು ಹೇಳುತ್ತದೆ: ಬೇರೆ ಧರ್ಮಕ್ಕೆ ಮತಾಂತರಗೊಂಡವರು ಈ ಹಿಂದೆ ಇದ್ದ ಮೂಲಧರ್ಮದ ಹಕ್ಕು ಮತ್ತು ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿವರಿಸಿದರು. ಮತಾಂತರ ನಿಷೇಧ ಮಸೂದೆ ಮಂಡನೆಯಾದ ನಂತರ ಇಂದು ವಿಧಾನಸಭೆಯಲ್ಲಿ ಅದರ ಉದ್ದೇಶಗಳನ್ನು ಅವರು ವಿವರಿಸಿದರು. ಉದಾಹರಣೆಗೆ ದಲಿತ ವ್ಯಕ್ತಿ ಮತಾಂತರವಾದರೆ, ಪರಿಶಿಷ್ಟ ಜಾತಿಗಳಿಗೆ ಸರ್ಕಾರದಿಂದ ನೀಡಲಾಗುವ ಎಲ್ಲ ಹಕ್ಕು-ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಸರ್ಕಾರದಿಂದ ಕೊಡ ಮಾಡುವ ಎಲ್ಲ ಪ್ರೋಮೋಷನ್ ಇರಬಹುದು, ಶಿಕ್ಷಣದ ಮೀಸಲಾತಿ, ಆರ್ಥಿಕ ಸಹಕಾರವನ್ನು ಕಳೆದುಕೊಳ್ಳಲಿದ್ದಾನೆ. ಇದನ್ನು ಜಿಲ್ಲಾಧಿಕಾರಿ ಖಾತರಿ ಮಾಡಲಿದ್ದಾನೆ. ಮತಾಂತರಗೊಂಡ ವ್ಯಕ್ತಿಯ ದಾಖಲೆ ನಮೂದಿಸುತ್ತಾರೆ. ಮತಾಂತರವಾದ ನಂತರ ಆ ಜಾತಿಯ ಸೌಲಭ್ಯವನ್ನು ಮತಾಂತರಗೊಂಡ ವ್ಯಕ್ತಿ ಪಡೆದುಕೊಳ್ಳುತ್ತಾರೆ ಎಂದು ಅವರು ವಿವರಿಸಿದರು.

ರೆವರೆಂಡರ್ ವಿರುದ್ಧ ಮಧ್ಯಪ್ರದೇಶ ಮತ್ತು ಒಡಿಶಾ, ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ 25ನೇ ಅನುಚ್ಛೇದದ ಪ್ರಕಾರ ಮತವನ್ನು ಪ್ರಚಾರ ಮಾಡುವ ಹಕ್ಕು ಮತ್ತೊಬ್ಬ ವ್ಯಕ್ತಿಯನ್ನು ಮತಾಂತರಗೊಳಿಸುವ ಹಕ್ಕನ್ನು ಒಳಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗೆ, ಮತ ಪ್ರಚಾರ ಮಾಡಲು ಸಂವಿಧಾನ ಎಲ್ಲರಿಗೂ ಅವಕಾಶ ಕೊಟ್ಟಿದೆ. ಅದನ್ನು ಯಾರಿಗೂ ನಿರ್ಬಂಧ ಮಾಡಲು ಸಾಧ್ಯವಿಲ್ಲ. ವಿವೇಕಾನಂದರು ವಿದೇಶದಲ್ಲಿ ಪ್ರಚಾರ ಮಾಡಿದ್ದಾರೆ. ಅನೇಕ ಘಟನಾಗಳು ಶಾಂತಿ ನೆಮ್ಮದಿಯನ್ನು ಹಾಳುವ ಮಾಡುವ ಘಟನೆಗಳು ನಡೆದಿವೆ. ಈ ಕಾಯ್ದೆಯನ್ನು ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತರುತ್ತಿದೆ ಎಂದು ಹೇಳಿದರು.

ಮತಾಂತರಗೊಳ್ಳುವ ವ್ಯಕ್ತಿ ಜಿಲ್ಲಾಧಿಕಾರಿಗಳಿಗೆ 30 ದಿನ ಮುಂಚಿತವಾಗಿ ತಿಳಿಸಿಬೇಕು. ಯಾರು ಮತಾಂತರ ಮಾಡುತ್ತಿದ್ದಾರೆ ಅವರು 30 ದಿನದೊಳಗಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು ಹಾಗೂ 21 ದಿನದೊಳಗಾಗಿ ಜಿಲ್ಲಾಧಿಕಾರಿ ಎಧುರು ಹಾಜರಾಗಬೇಕು.

ಬಲವಂತದ, ಆಮಿಷ ಮತಾಂತರಕ್ಕೆ ಶಿಕ್ಷೆ ಏನು?: ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಯ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಯ ನೋಟಿಸ್ ಬೋರ್ಡ್ ನಲ್ಲಿ ಪ್ರಚಾರ ಮಾಡಬೇಕು. ಮತಾಂತರದ ಬಗ್ಗೆ ಯಾವುದಾರೂ ಆಕ್ಷೇಪಣೆಗಳು ಬಂದರೆ ವಿಚಾರಣೆ ನಡೆಸಬೇಕು. ವಿಚಾರಣೆಯಲ್ಲಿ ಬಲವಂತ, ಆಮಿಷ ಅಪರಾಧ ಅಂತ ಕಂಡುಬಂದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಪೊಲೀಸರಿಗೆ ತಿಳಿಸುತ್ತಾರೆ. ಬಲವಂತ ಮತಾಂತರ ಮಾಡಿದರೆ 3 ರಿಂದ 5 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ. ಅಪ್ರಾಪ್ತ ವಯಸ್ಕರು ಮತ್ತು ಅಸ್ವಸ್ಥರು, ಅನುಸೂಚಿತ ಜಾತಿ, ಪಂಗಡಕ್ಕೆ ಸಂಬಂಧಿಸಿದ ಪ್ರಕರಣವಾದರೆ ಮತಾಂತರಗೊಳಿಸಿದವರಿಗೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಹಾಗೆಯೇ ಸಾಮೂಹಿಕ ಮತಾಂತರ ಸಂದರ್ಭದಲ್ಲಿ ಉಲ್ಲಂಘನೆಯಾದರೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ 10 ಲಕ್ಷ ರೂಪಾಯಿ ದಂಡ. ಮತಾಂತರದಿಂದ ಬಲಿಯಾದರೆ, ಆಪಾದಿತರಿಂದ ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ಪರಿಹಾರ ನ್ಯಾಯಾಲಯ ನೀಡುವ ಶಿಕ್ಷೆಗೆ ಒಳಗಾಗಬೇಕು. ಕಾನೂನಬಾಹಿರ, ಬಲವಂತದ ಏಕ ಮಾತ್ರ ಉದ್ದೇಶದಿಂದ ಮದುವೆ ಆದರೆ ಅಸಿಂಧು ಎಂದು ಘೋಷಣೆ ಮಾಡುತ್ತಾರೆ. ಇದು ಜಾಮೀನು ರಹಿತ ಪ್ರಕರಣವಾಗಲಿದೆ ಎಂದು ಹೇಳಿದರು.

ಈ ರೀತಿಯ ಕಾಯ್ದೆಯನ್ನು ಮಂಡನೆ ಮಾಡುತ್ತಿದ್ದೇವೆ. ಬಲವಂತ ಹಾಗೂ ಆಮಿಷ ಮಾಡುವವರ ವಿರುದ್ಧ ಶಿಕ್ಷೆಯನ್ನು ವಿಧಿಸಿ ಅಂತರ ಮತಾಂತರವನ್ನು ಕಟ್ಟುನಿಟ್ಟಾಗಿ ನಿಷೇಧಸುವ ಕೆಲಸವಾಗಲಿದೆ. ಯಾರು ಮತಾಂತರವನ್ನು ಉದ್ಯೋಗ ಅಂತಾ ಭಾವಿಸುತ್ತಾರೆ ಅಂತವರು ಎಚ್ಚೆತ್ತುಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದರು.

ಬಲವಂತದ ಮತ್ತು ಆಮಿಷವೊಡ್ಡಿ ಮತಾಂತರ ಮಾಡಿದರೆ ಅಂತಹ ಪ್ರಕರಣವನ್ನು ನಿಷೇಧಿಸಿ, ಅಸಿಂಧುಗೊಳಿಸಿ ಕಟ್ಟುನಿಟ್ಟಿನ ಕ್ರಮವನ್ನು ವಿಧೇಯಕದಡಿ ಮಾಡಲಾಗುತ್ತದೆ, ಬೇರೆ ಯಾರಿಗೂ ಇದರಿಂದ ಹಾನಿಯಿಲ್ಲ ಎಂದು ವಿವರಿಸಿದರು. ಈ ವಿಧೇಯಕ ಕೇವಲ ಬಿಜೆಪಿ ಸರ್ಕಾರದ್ದಲ್ಲ, ಹಿಂದಿನ ಸರ್ಕಾರದ ಶಿಶು ಇದು ಎಂದು ಕೂಡ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಯಾವುದೇ ಧರ್ಮದ ವಿರುದ್ಧ ಅಲ್ಲ: ಮತಾಂತರ ನಿಷೇಧ ವಿಧೇಯಕವನ್ನು ಯಾವುದೇ ಧರ್ಮದ ವಿರುದ್ಧವೂ ತರುತ್ತಿಲ್ಲ. ಆ ಉದ್ದೇಶವೂ ಸರ್ಕಾರಕ್ಕಿಲ್ಲ. ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶವೂ ಇದರಲ್ಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮತಾಂತರ ನಿಷೇಧ ವಿಧೇಯಕ ಮಂಡನೆಯಾದ ನಂತರ ಅವರಿಂದು ಚರ್ಚೆ ಆರಂಭಕ್ಕೆ ಮುನ್ನ ವಿಧೇಯಕ ಉದ್ದೇಶಗಳನ್ನು ವಿವರಿಸಿದರು. 8 ರಾಜ್ಯಗಳು ನಮ್ಮ ದೇಶದಲ್ಲಿ ಈಗಾಲೇ ಇಂತಹ ಬಿಲ್ ಅನ್ನು ತಂದಿದ್ದಾವೆ. ಅನುಷ್ಠಾನ ಮಾಡುತ್ತಿದ್ದಾರೆ. ಕರ್ನಾಟಕ 9ನೇ ರಾಜ್ಯವಾಗಲಿದೆ. ಹಾಗಾಗಿ ಯಾರಿಗೂ ಯಾವ ನ್ಯೂನತೆಗಳು. ಯಾವ ತೊಂದರೆ ಕೊಡುವ ಉದ್ದೇಶವಿಲ್ಲ. ಇತ್ತೀಚೆಗೆ ಮತಾಂತರ ದೊಡ್ಡ ಪಿಡುಗಾಗಿದೆ. ಇದೇ ಸದನದಲ್ಲಿ ಸದಸ್ಯರೊಬ್ಬರು ತಮ್ಮ ತಾಯಿಯನ್ನು ಮತಾಂತರ ಮಾಡಿದ್ದಾರೆ. ಸಂಸಾರದಲ್ಲಿ ಯಾವ ರೀತಿಯ ಕ್ಷೋಭೆ ನಿರ್ಮಾಣವಾಗಿದೆ ಎಂದು ಹೇಳೀದ್ದಾರೆ. ಊರೂರನಲ್ಲಿ ಕೆಲವರು ಮತಾಂತರ ಆಗಿದ್ದಾರೆ. ಒಂದೆ ಜನಾಂಗದವರು ಕೆಲವರು ಆಗಲಿಲ್ಲ. ಇಬ್ಬರಲ್ಲಿ ತಿಕ್ಕಾಟ ಉಂಟಾಗುತ್ತಿದೆ. ಹಾಗೆನೇ ಇತ್ತೀಚೆಗೆ ಉಡುಪಿಯಲ್ಲಿ ಮತಾಂತರದ ಹಿನ್ನೆಲೆಯಲ್ಲಿ ಒಂದು ಆತ್ಮಹತ್ಯೆಯಾಯಿತು. ಮಂಗಳೂರಿನಲ್ಲಿ ನಾಲ್ವರು ಒಂದೇ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡರು. ಪ್ರಕರಣಗಳು ದಾಖಲಾಗಿದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಭಾರತ ಸಂವಿಧಾನದ ಭಾಗ 3ರ ಇತರ ಉಪಬಂಧುಗಳಿಗೆ ಒಳಪಟ್ಟು ಭಾರತ ಸಂವಿಧಾನದ 25ನೇ ಅನುಚ್ಛೇದದಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕಾನೂನ್ನು ಹಕ್ಕು ಖಾತರಿಗೊಳಿಸಲಾಗಿದೆ. ಎಲ್ಲ ವ್ಯಕ್ತಿಗಳು ತಮ್ಮ ಆಯ್ಕೆಯ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದರು.