ಪೀರನವಾಡಿ: ಕಾರ್ಗಿಲ್ ವಿಜಯ ದಿನ ಆಚರಣೆ

ಬೆಳಗಾವಿ: ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮ ನಡೆಯಿತು.
ಪೀರನವಾಡಿ, ಕೇದಾರವಾಡಿ, ಹುಂಚನಾಟ್ಟಿ ಗ್ರಾಮಗಳ 150 ಮಂದಿ ಹಾಲಿ ಹಾಗೂ ಮಾಜಿ ಸೈನಿಕರನ್ನು ಸತ್ಕರಿಸಲಾಯಿತು. ಮುಖಂಡರಾದ ಸತೀಶ ಪಾಟೀಲ, ಕೇಶವ ಪೋಳ, ಪ್ರಮೋದ ಪಾಟೀಲ, ಹನುಮಂತ ಗುರವ. ಮೋಹನಶಾಸ್ತ್ರಿ. ಗುರವಸರ, ಸಂತೋಷ್ ಜೈನೋಜಿ, ಪಿರಾಜಿ ಸುಳಗೇಕರ, ಸುರೇಖಾ ನೇಸರಕರ, ಕೃಷ್ಣಾಬಾಯಿ ಆಪ್ಟೇಕರ, ಮೂರೂ ಗ್ರಾಮಗಳ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರು, ಹಿರಿಯರು, ಸೈನಿಕರ ಕುಟುಂಬದವರು ಪಾಲ್ಗೊಂಡಿದ್ದರು.