ರಾಜ್ಯದಲ್ಲಿ ಓಮಿಕ್ರಾನ್ ಬ್ಲಾಸ್ಟ್: ಇಂದು 146 ಜನರಿಗೆ ಓಮಿಕ್ರಾನ್ ದೃಢ, ಸೋಂಕಿತರ ಸಂಖ್ಯೆ 479ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಏರಿಕೆಯ ಜೊತೆಗೆ ಜೊತೆಗೆ ಓಮಿಕ್ರಾನ್ ಪ್ರಕರಣಗಳ ( Omicron Variant ) ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ. ಇಂದು ಹೊಸದಾಗಿ 146 ಜನರಿಗೆ ಓಮಿಕ್ರಾನ್ ದೃಢಪಟ್ಟಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ( Twitter ) ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು ಇಂದು ಹೊಸದಾಗಿ ರಾಜ್ಯದಲ್ಲಿ 146 ಜನರಿಗೆ ಓಮಿಕ್ರಾನ್ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 479ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದ್ದಾರೆ.
146 new cases of Omicron have been confirmed in Bengaluru today taking the overall tally in Karnataka to 479.#COVID19 #Omicron @BSBommai
— Dr Sudhakar K (@mla_sudhakar) January 10, 2022
ಈಗಾಗಲೇ ಸಂಸದ ಡಿ.ಕೆ.ಸುರೇಶ್ ಅವರು ಡಿಕೆ ಶಿವಕುಮಾರ್ ( DK Shivakumar ) ಅವರನ್ನು ಭೇಟಿಯಾಗಿದ್ದಂತ ಅಧಿಕಾರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಗುಡುಗಿದ್ದರು. ಸರ್ಕಾರವೇ ಕೊರೋನಾ ಹರಡಿಸೋ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದರು. ಈ ಬೆನ್ನಲ್ಲೇ ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದಂತ ಎಡಿಸಿ ಜವರೇಗೌಡ ( ADC Javaregowdha ) ಎಂಬುವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ರಾಮನಗರದ ಕನಕಪುರದ ಬಳಿಯ ಸಂಗಮ ಕ್ಷೇತ್ರದಲ್ಲಿ ಮೇಕೆದಾಟು ಪಾದಯಾತ್ರೆ ಆರಂಭಿಸೋ ಮುನ್ನಾ, ಶನಿವಾರ ಪಾದಯಾತ್ರೆ ನಡೆಸಬೇಡಿ ಎಂಬುದಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಹೇಳೋದಕ್ಕೆ ಬಂದಿದ್ದಂತ ಎಡಿಸಿ ಜವರೇಗೌಡಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿದು ಬಂದಿದೆ. ಇದಷ್ಟೇ ಅಲ್ಲದೇ ಕೊರೋನಾ ನಿಯಮ ಪಾಲಿಸಿ ಪಾದಯಾತ್ರೆ ಮಾಡುವಂತೆಯೂ ಅಂದು ಎಡಿಸಿ ಜವರೇಗೌಡ ತಿಳಿಸಿದ್ದರು. ಒಂದು ಮೂರು ನಾಲ್ಕು ನಿಮಿಷ ಮಾತನಾಡಿದ್ದಂತ ಅವರು, ಡಿಕೆ ಶಿವಕುಮಾರ್ ಗೂ ಕೊರೋನಾ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಿದ್ದರು. ಈ ವೇಳೆ ಅವರನ್ನು ಬೈದು ಕಳಿಸಿದ್ದರು. ಈ ಬಳಿಕೆ ಪರೀಕ್ಷೆಗೆ ಒಳಪಟ್ಟಿದ್ದಂತ ಎಡಿಸಿ ಜವರೇಗೌಡ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.