ಹೊಸ ವರ್ಷಾಚರಣೆ ದಿನ ಎಲ್ಲಾ ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ - ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ
ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕ್ಷಣಗಣ ಶುರುವಾಗಿದೆ. ಎರಡು ವರ್ಷಗಳ ಬಳಿಕ ಈ ಬಾರಿ ಹೊಸ ವರ್ಷಾಚರಣೆಗೆ ಅದ್ಧೂರಿ ಸಿದ್ಧತೆ ಮಾಡಲಾಗಿದೆಈಗಾಗಲೇ ಖಾಕಿ ಫುಲ್ ಅಲರ್ಟ್ ಆಗಿದೆ. ಹೊಸ ವರ್ಷಾಷಚರಣೆ ದಿನ ಎಲ್ಲಾ ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿ. 31 ರಾತ್ರಿ 9 ಗಂಟೆ ಬಳಿಕ ನಗರದ 30 ಪ್ಲೈಓವರ್ ಬಂದ್ ಆಗಿದೆ. ಏರ್ ಪೋರ್ಟ್ ಪ್ಲೈಓರ್ ಮೇಲೆ ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ. ನೈಸ್ ರಸ್ತೆಯಲ್ಲೂ ರಾತ್ರಿ 9 ಗಂಟೆ ಬಳಿಕ ಬೆಕ್ ಗಳ ಸಂಚಾರಕ್ಕೆ ಬಂದ್ ಆಗಲಿದೆ. ಹೊಸ ವರ್ಷಾಚರಣೆ ವೇಳೆ ವೀಲ್ಹಿಂಗ್ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಹೊಸ ವರ್ಷ ದಿನ ಮೆಟ್ರೋ , ಬಿಬಿಎಂಟಿ ಸಂಚಾರ ಅವಧಿ ವಿಸ್ತರಣೆ ಮಾಡಲಾಗುವುದು ಎಂದರು.