ತ್ತಷ್ಟು ಕಡಿಮೆಯಾಗುತ್ತಾ ಪೆಟ್ರೋಲ್​-ಡೀಸೆಲ್​ ದರ?: ಸಚಿವ ನಿತಿನ್​ ಗಡ್ಕರಿ ಕೊಟ್ಟ ಸುಳಿವೇನು?

ತ್ತಷ್ಟು ಕಡಿಮೆಯಾಗುತ್ತಾ ಪೆಟ್ರೋಲ್​-ಡೀಸೆಲ್​ ದರ?: ಸಚಿವ ನಿತಿನ್​ ಗಡ್ಕರಿ ಕೊಟ್ಟ ಸುಳಿವೇನು?
ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆ ಎಂದು ಪೆಟ್ರೋಲ್‌(Petrol), ಡೀಸೆಲ್‌(Diesel) ಮೇಲಿನ ತೆರಿಗೆ(Tax)ಯನ್ನು ಇಳಿಕೆ ಮಾಡಿತ್ತು. ಬಳಿಕ ಬಿಜೆಪಿ ಆಡಳಿತದ ಹಲವು ರಾಜ್ಯಗಳು ಸೇರಿ ಹಲವು ರಾಜ್ಯ ಸರ್ಕಾರಗಳು ಮತ್ತಷ್ಟು ತೆರಿಗೆ ಇಳಿಕೆ ಮಾಡಿದ್ದವು.
ಇದರಿಂದ ಬೆಲೆ ಏರಿಕೆ(Price Hike)ಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಹಾಗೂ ಜನ ಸಾಮಾನ್ಯರಿಗೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ದೊರೆತಿದೆ. ಆದರೂ, ಪೆಟ್ರೋಲ್‌ ದರ ಈಗಲೂ 100ಕ್ಕಿಂತ ಹೆಚ್ಚೇ ಇದೆ. ಈ ಹಿನ್ನೆಲೆ ಮತ್ತಷ್ಟು ಕಡಿಮೆ ಮಾಡಬೇಕೆಂಬ ಆಗ್ರಹವೂ ಇದೆ. ಈ ಸಂಬಂಧ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ(Union Transport Minister Nitin Gadkari) ತೈಲ(Oil) ದರದ ತೆರಿಗೆಯನ್ನು ಹೇಗೆ ಮತ್ತಷ್ಟು ಕಡಿಮೆ ಮಾಡಬಹುದೆಂದು ಸೂಚಿಸಿದ್ದಾರೆ ನೋಡಿ.

ತೆರಿಗೆ ಕಡಿತದ ಬಗ್ಗೆ ಐಡಿಯಾ ಕೊಟ್ಟ ನಿತಿನ್​ ಗಡ್ಕರಿ

ಹೌದು, ಕೇಂದ್ರ ಸಚಿವ ನಿತಿನ್ ಗಡ್ಕರಿ ನವೆಂಬರ್​ 11ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೇಗೆ ಕಡಿತಗೊಳಿಸಬಹುದು ಎಂಬ ಐಡಿಯಾ ಹಂಚಿಕೊಂಡಿದ್ದಾರೆ. ಹಲವು ವಿಶಿಷ್ಟ ಐಡಿಯಾಗಳಿಗೆ ಹೆಸರಾದ ಕೇಂದ್ರ ಸಚಿವರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಆದರೆ, ಪೆಟ್ರೋಲಿಯಂ ಉತ್ಪನ್ನಗಳನ್ನು ತರಲು ಎಲ್ಲಾ ರಾಜ್ಯಗಳ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಅವರು ಸೂಚಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಾರೆ ಎಂದು ಬಿಜೆಪಿ ನಾಯಕ ಹೇಳಿದರು.

ಜಿಎಸ್‌ಟಿ ಆಡಳಿತಕ್ಕೆ ತರುವುದಕ್ಕೆ ವಿರೋಧ!

ಟೈಮ್ಸ್ ನೌ ಶೃಂಗಸಭೆಯ ನೇಪಥ್ಯದಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ, "ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳೂ ಸದಸ್ಯರಾಗಿದ್ದಾರೆ. ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಆಡಳಿತಕ್ಕೆ ತರುವುದನ್ನು ವಿರೋಧಿಸುತ್ತಿವೆ. "ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಆಡಳಿತದ ಅಡಿಯಲ್ಲಿ ತಂದರೆ, ಈ ಉತ್ಪನ್ನಗಳ ಮೇಲಿನ ತೆರಿಗೆಗಳು ಕಡಿಮೆಯಾಗುತ್ತವೆ ಮತ್ತು ಕೇಂದ್ರ ಹಾಗೂ ರಾಜ್ಯಗಳ ಆದಾಯ ಹೆಚ್ಚಾಗುತ್ತದೆ" ಎಂದು ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಇದನ್ನು : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದು ಅಲ್ಪ ಬದಲಾವಣೆ; ನಿಮ್ಮ ನಗರದಲ್ಲಿ ಇಂದಿನ ಬೆಲೆ ಎಷ್ಟು?

ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಆಡಳಿತದ ಅಡಿಯಲ್ಲಿ ತರಲು ಪ್ರಸ್ತಾಪಿಸಿದ್ದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಕೇರಳ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ವಿಷಯವನ್ನು ಚರ್ಚಿಸಿತು. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರದಿರಲು ಕೌನ್ಸಿಲ್ ನಿರ್ಧರಿಸಿದೆ.


ಆದರೂ, ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್‌ ಡೀಸೆಲ್‌ ಬೆಲೆಯನ್ನು ತೀವ್ರ ಕಡಿಮೆ ಮಾಡುತ್ತದೆ. ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದ ಪೆಟ್ರೋಲ್ ಬೆಲೆಗಳನ್ನು ಕೇಂದ್ರವು ಇತ್ತೀಚೆಗೆ 2 ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ನಂತರ ಬೆಲೆ ಇಳಿಕೆಯಾಗಿದೆ. ಇನ್ನೊಂದೆಡೆ, ಜಿಎಸ್‌ಟಿ ವ್ಯಾಪ್ತಿಗೆ ತಂದ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ ಆದಾಯ ಕಡಿಮೆಯಾಗುತ್ತದೆ. ಅದರಲ್ಲೂ ರಾಜ್ಯಗಳ ಆದಾಯದ ಮೇಲೆ ತೀವ್ರ ಹೊಡೆತ ಬೀಳಬಹುದು ಎಂದು ಅರ್ಥೈಸುತ್ತದೆ.