ಸಿ.ಟಿ.ರವಿ ವಿಕೃತ ಸ್ವಭಾವದ ವ್ಯಕ್ತಿ : ಆರ್. ಧ್ರುವ ನಾರಾಯಣ್

ಚಿಕ್ಕಮಗಳೂರು, ಡಿ.23- ಶಾಸಕ ಸಿ.ಟಿ. ರವಿ ಅವರು ವಿಕೃತ ಸ್ವಭಾವದ ವ್ಯಕ್ತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರವಿ ಗೌರವ ತರುವಂತಹ ಭಾಷೆ ಮಾತನಾಡುವುದಿಲ್ಲ.
ನೆಹರು,ಇಂದಿರಾಗಾಂಧಿ ಬಗ್ಗೆ ಮಾತನಾಡಿದ್ದರೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ತಾನು ಪ್ರಾಮಾಣಿಕನಾಗಿರಬೇಕು ಸಚ್ಚಾರಿತ್ರ್ಯ ಹೊಂದಿರಬೇಕು. ಆಡಳಿತ ವೈಫಲ್ಯಗಳನ್ನು ಮರೆಮಾಚಲು ವಿಷಯಗಳನ್ನು ತಿರುಚುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರೆಲ್ಲರಿಗೂ ಆರೆಸ್ಸೆಸ್ ಕೈಗೊಂಬೆ ಎಂದು ಕಟಕಿಯಾಡಿದರು.
ಕಳೆದ ಹತ್ತು ವರ್ಷ ನಗರಸಭೆ ಅಕಾರ ಪಡೆದ ಬಿಜೆಪಿ ಮೂಲ ಸೌಕರ್ಯ ನೀಡುವಲ್ಲಿ ವಿಫಲವಾಗಿದೆ. ನಗರದಲ್ಲಿ ನಡೆಯುತ್ತಿರುವ ಒಳಚರಂಡಿ, 247 ಅಮೃತ್ ಯೋಜನೆ ಕಾಮಗಾರಿ ಮುಗಿಯದೆ ಬಿಲ್ ಪಾಸ್ ಆಗಿದೆ. ಆಗಿರುವ ಅಲ್ಪಸ್ವಲ್ಪ ಕೆಲಸವು ಕಳಪೆಯಿಂದ ಕೂಡಿದೆ ಎಂದರು.
27 ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಅಂಶುಮಂತ, ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಸಿ. ಶಿವಾನಂದಸ್ವಾಮಿ, ಮಂಜೇಗೌಡ ಮೊದಲಾದವರಿದ್ದರು.