ವಿಧಾನಸಭೆಯಲ್ಲಿ ಮತಾಂತರ ಕೋಲಾಹಲ, ಇಕಟ್ಟಿಗೆ ಸಿಲುಕಿದ ಕಾಂಗ್ರೆಸ್

ಬೆಳಗಾವಿ,ಡಿ.23- ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಕ ವಿಧೇಯಕ 2021 ವಿಧಾನಸಭೆಯಲ್ಲಿಂದು ಮಂಡನೆಯಾದ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದ ಕಾಂಗ್ರೆಸ್, ತಾನೇ ಮಾಡಲು ಉದ್ದೇಶಿಸಿದ್ದ ಕರಡು ನೀತಿಯಿಂದ ಇಕಟ್ಟಿಗೆ ಸಿಲುಕಿದ ಪ್ರಸಂಗ ನಡೆಯಿತು.
ಬೆಳಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವ ಅರಗ ಜ್ಞನೇಂದ್ರ ಅವರು, ಕಾಯ್ದೆಯನ್ನು ಮಂಡಿಸಿದ ನಂತರ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಈ ಹಿಂದೆ 2014, 2016 ನವೆಂಬರ್ 16ರಂದು ಕಾಂಗ್ರೆಸ್ ಕಾನೂನು ಆಯೋಗಕ್ಕೆ ವಿಧೇಯಕವನ್ನು ಮಂಡಿಸುವ ಕುರಿತು ಬರೆದಿದ್ದ ಪತ್ರ ಮತ್ತು ಪರಿಶೀಲನಾ ಸಮಿತಿ ಮುಂದೆ ಬಂದಿದ್ದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟಿಗೆ ಸಿಲುಕಿಸಿತು.
ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಕೋಲಾಹಲ, ಆರೋಪ ಪ್ರತ್ಯಾರೋಪ ನಡೆದು ಕೆಲಕಾಲ ಕಲಾಪವನ್ನು ಮುಂದೂಡಲಾಯಿತು.
ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ಅವರು ಕರಡು ನೀತಿಯನ್ನು ಸಿದ್ದಪಡಿಸಲು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದರು. ಕಾನೂನು ಆಯೋಗವು ಕರಡನ್ನು ಪರಿಶೀಲಿಸಿ ಪರಿಶೀಲನಾ ಸಮಿತಿಯ ಮುಂದೆ ಇಟ್ಟಿತ್ತು.
ನೀವೇ ನಿಮ್ಮ ಅಕಾರದ ಅವಯಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಕಾಯ್ದೆ ಇದು. ದಯವಿಟ್ಟು ಸಹಕಾರ ಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ರಮೇಶ್ಕುಮಾರ್ ಸೇರಿದಂತೆ ಕಾಂಗ್ರೆಸ್ನ ಎಲ್ಲ ಸದಸ್ಯರು, ಕರಡು ಸಿದ್ದಪಡಿಸಲು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದರು ಕಡತವನ್ನು ಸದನದ ಮುಂದಿಡಿ ಎಂದು ಸವಾಲು ಎಸೆದರು.
ಈ ಸವಾಲನ್ನು ಸ್ವೀಕರಿಸಿದ ಮಾಧುಸ್ವಾಮಿ, ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಕಾನೂನು ಆಯೋಗ ಸಿದ್ದಪಡಿಸಿದ್ದ ಕರಡು ಮತ್ತು ಪರಿಶೀಲನಾ ಸಮಿತಿಗೆ ಶಿಫಾರಸ್ಸು ಮಾಡಿದ್ದ ಕಡತಗಳನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಿಟ್ಟರು.
ನಿಮ್ಮ ಅಕಾರದ ಅವಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗಿತ್ತು. ಈಗ ನಾವು ಸಂವಿಧಾನದ ಚೌಕಟ್ಟಿನಡಿ ಮೂರ್ನಾಲ್ಕು ಅಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಿದ್ದೇವೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಪತ್ರವನ್ನು ಪರಿಶೀಲಿಸಿ ಸಹಿ ಹಾಕಿದ್ದಾರೆ. ಈಗೇಕೆ ವಿರೋಧ ಎಂದು ಪ್ರಶ್ನಿಸಿದರು.
ಆಗ ಸಿದ್ದರಾಮಯ್ಯನವರು, ನಾನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿರುವುದಕ್ಕೆ ದಾಖಲೆ ಇದ್ದರೆ ಸದನದ ಮುಂದೆ ಇಡಲು ಸವಾಲು ಹಾಕಿದರು.
ಈ ವೇಳೆ ಸಭಾಧ್ಯಕ್ಷರು ಕಡತವನ್ನು ಓದಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್.ಆಂಜನೇಯ ಅವರು, ಅಂದಿನ ಕಾನೂನು ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಟಿಪ್ಪಣಿಯನ್ನು ಸಿದ್ದಪಡಿಸಿ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆಯೋಗವು ಕರಡನ್ನು ಸಿದ್ದಪಡಿಸಿ ಅಂತಿಮವಾಗಿ ಪರಿಶೀಲನಾ ಸಮಿತಿಗೆ ಕಳುಹಿಸಿದೆ.
ಪರಿಶೀಲನಾ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪಣಿಯನ್ನು ಕಳುಹಿಸಿಕೊಟ್ಟಿದೆ. ಈ ಟಿಪ್ಪಣಿಗೆ ಅಂದಿನ ಸಿಎಂ ಸಿದ್ದರಾಮಯ್ಯನವರೇ ಸಹಿ ಹಾಕಿದ್ದಾರೆ ಎಂದು ಕಡತಗಳನ್ನು ಉಲ್ಲೇಖಿಸಿದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು, ಸ್ಪೀಕರ್ ಅವರು ಕಡತವನ್ನು ಓದುತ್ತಿದ್ದಂತೆ ಮೇಜು ಕುಟ್ಟಿ ಸ್ವಾಗತಿಸಿದರು. ಆದರೆ ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಸಿದರು.
ಈ ಹಂತದಲ್ಲಿ ರಮೇಶ್ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಕಡತಕ್ಕೆ ಸಹಿ ಹಾಕಿರಬಹುದು. ಆದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಂದಾಗಲಿ, ಇಲ್ಲವೇ ಸಂಪುಟದಲ್ಲಿ ತೀರ್ಮಾನಿಸಿ ಎಂದು ಎಲ್ಲಿಯೂ ಹೇಳಿಲ್ಲ. ಟಿಪ್ಪಣಿಗೆ ಸಹಿ ಹಾಕಿದ ತಕ್ಷಣ ಅದನ್ನು ಒಪ್ಪಿಕೊಂಡಂತಾಗುವುದಿಲ್ಲ ಎಂದು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತದ್ದರು.