ವೈದ್ಯರ ಸೇವೆ ಮರೆಯಲಾಗದು...
ಶಿಗ್ಗಾಂವಿ: ಅಧಿಕಾರ, ಯೌವನ, ಹಣ ಬರುತ್ತೇ ಆದರೆ ಜೀವ ಸಿಗುವುದಿಲ್ಲ, ವೈದ್ಯರ ಸಲಹೆ, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ತೆಗೆದುಕೊಳ್ಳುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಹೋರಾಡುವುದು ಅವಶ್ಯವಿದೆ ಎಂದು ಶಿಗ್ಗಾಂವಿ ತಾಲ್ಲೂಕಿನ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅವರು ತಿಳಿಸಿದರು. ನಗರದ ಖಾಸಗಿ ಆಸ್ಪತ್ರೆಗೆ ಹಾಗೂ ಸರಕಾರಿ ಆಸ್ಪತ್ರೆಗೆ ತಾಲ್ಲೂಕಿನ ಸತ್ಯಸಾಯಿ ಸೇವಾ ಸಂಸ್ಥೆಯ ವತಿಯಿಂದ ಒಂದು ಆಮ್ಲಜನಕ ಯಂತ್ರವನ್ನು ನೀಡಿದರು. ಸತ್ಯಸಾಯಿ ಸೇವಾ ಸಂಸ್ಥೆಯು ಕಳೆದ ಕೊರೊನಾ ಸಂದರ್ಭದಲ್ಲಿ ಕೂಡ ಆಹಾದ ಕಿಟ್ ವ್ಯವಸ್ಥೆ ಮಾಡಿದ್ದು ಈ ಸಂದರ್ಭದಲ್ಲಿ ಉದಯಶಂಕರ ಹೊಸಮನಿ, ನೀಲಕಂಠ ಅಡರಗಟ್ಟಿ, ಶಿವಣ್ಣ ಮೋಟೆಬೆನ್ನೂರು, ಗಣೇಶ ಬಗಾಡೆ, ಅಶೋಕ್, ಮೃತ್ಯುಂಜಯ ವಾಲಿಶೆಟ್ಟರ್, ಸೋಮಣ್ಣ ಹರವಿ ಉಪಸ್ಥಿತರಿದ್ದರು.