ಸಿದ್ದಾರ್ಥ್​ ಜೊತೆ ರಶ್ಮಿಕಾ ಹಾರ್ಟ್ ಸಿಂಬಲ್​ ಪೋಸ್! ಶುರುವಾಯ್ತು ನ್ಯೂ ಗಾಸಿಪ್‌?

ಸಿದ್ದಾರ್ಥ್​ ಜೊತೆ ರಶ್ಮಿಕಾ ಹಾರ್ಟ್ ಸಿಂಬಲ್​ ಪೋಸ್! ಶುರುವಾಯ್ತು ನ್ಯೂ ಗಾಸಿಪ್‌?

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ಸ್ಟಾರ್ ಸ್ಟೇಟಸ್ ಪಡೆದುಕೊಂಡರು. ಚಲೋ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟರು.

ತಮ್ಮ ಟ್ಯಾಲೆಂಟ್‌ ಮತ್ತು ಬ್ಯೂಟಿ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್‌ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಸದ್ಯ ಯಶಸ್ಸಿನತ್ತ ದಾಪುಗಾಲಿಟ್ಟಿದ್ದಾರೆ.

ತಮ್ಮ 'ಮಿಷನ್ ಮಜ್ನು' ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಲು ರಶ್ಮಿಕಾ ಸಖತ್‌ ಹಾಟ್ ಲುಕ್‌ನಲ್ಲಿ ಬಂದಿದ್ದರು. ಮಿನಿ ಸ್ಕರ್ಟ್ ಹಾಕಿಕೊಂಡು, ಎಲ್ಲರ ಗಮನ ಸೆಳೆದರು. ಈ ವೇಳೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಲವ್ ಸಿಂಬಲ್ ಪೋಸ್‌ ಕೊಟ್ಟರು. ಇದೀಗ ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ವಿಜಯ್ ದೇವರಕೊಂಡ ಜೊತೆ ಗೀತ ಗೋವಿಂದಂ ಬಳಿಕ ರಶ್ಮಿಕಾ ಹಾಗೂ ವಿಜಯ್‌ ಬಗ್ಗೆ ಗಾಸಿಪ್‌ ಶುರುವಾಗಿತ್ತು. ಇದೀಗ ಸಿದ್ಧಾರ್ಥ ಮಲ್ಹೋತ್ರಾ ಜೊತೆ ರಶ್ಮಿಕಾ ಹಾರ್ಟ್‌ ಸಿಂಬಲ್‌ ಪೋಸ್‌ ಕೊಟ್ಟಿರುವುದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಅನೇಕ ಗಾಸಿಪ್‌ಗಳು ಶುರುವಾಗಿವೆ.

ಸದ್ಯ ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾದಲ್ಲಿ ರಶ್ಮಿಕಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿಯಾಗಿ ನಟಿಸಿದ್ದ ಈ ಚೆಲುವೆ ಈಗ ಪುಷ್ಪಾ 2 ಮೂಲಕ ಎಲ್ಲರ ಮನಗೆಲ್ಲಲು ರೆಡಿಯಾಗಿದ್ದಾರೆ.ಟಾಲಿವುಡ್ ಜೊತೆಗೆ ಬಾಲಿವುಡ್ ಸಿನಿಮಾಗಳನ್ನೂ ಮಾಡುತ್ತಿರುವ ರಶ್ಮಿಕಾ "ಗುಡ್ ಬೈ'' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದರು. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ ನಟಿಸುವ ಮೂಲಕ ಬಿ-ಟೌನ್ ಪ್ರೇಕ್ಷಕರನ್ನು ಸಹ ಸೆಳೆದುಕೊಂಡರು. ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಮುಂಬರುವ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ಈ ಕಿರಿಕ್‌ ಬೆಡಗಿ ರೆಡಿಯಾಗಿದ್ದಾರೆ ಎನ್ನಲಾಗಿದೆ. ಈ ವಿಶೇಷ ಹಾಡಿನಲ್ಲಿ ನಟಿಸಲು ರಶ್ಮಿಕಾ ಸುಮಾರು ಐದು ಕೋಟಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗ್ತಿದೆ.