ಹುಲಿ ದಾಳಿಗೆ ಕರು ಬಲಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿ ಹೊಸಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಕರುವೊಂದು ಬಲಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಸುರೇಶ್ ಎಂಬುವರಿಗೆ ಸೇರಿದ ಕರುವನ್ನು ತಿಂದು ಹಾಕಿರುವ ವ್ಯಾಘ್ರವು ಬಿ.ಹೊಸಳ್ಳಿ, ಭಾರತಿಬೈಲ್, ಹೊಕ್ಕಳ್ಳಿ, ಬಾನಳ್ಳಿ ಸುತ್ತಮುತ್ತ ಹುಲಿ ಓಡಾಡುತ್ತಿದ್ದು, ಕಳೆದ ಆರು ತಿಂಗಳಿಂದ 40ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಹಾಗಾಗಿ ಹುಲಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.