ಅಧಿಕಾರಿಗಳಷ್ಟೇ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ
ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ಗದಗದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಇಂದು ಹಣ ಬಿಡುಗಡೆ ಮಾಡಬೇಕಿತ್ತು, ನೀತಿ ಸಂಹಿತೆ ಇರೋದ್ರಿಂದ ಅನುಮತಿ ಕೇಳಿದ್ದೇನೆ, ಇಂದು-ನಾಳೆಯಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಆಶ್ವಾಸನೆ ನೀಡಿದರು.