15 ರಾಜ್ಯಗಳಲ್ಲಿ ಓಮಿಕ್ರಾನ್: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ

ನವದೆಹಲಿ, ಡಿಸೆಂಬರ್ 23: ಭಾರತದ ಓಮಿಕ್ರಾನ್ ಸಂಖ್ಯೆ 200 ದಾಟುತ್ತಿದ್ದಂತೆ, ದೇಶದಾದ್ಯಂತ ಒಟ್ಟಾರೆ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ 6.30ಕ್ಕೆ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಇಲ್ಲಿಯವರೆಗೆ ಭಾರತವು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 213 ಒಮಿಕ್ರಾನ್ ಪ್ರಕರಣಗಳನ್ನು ದಾಖಲಿಸಿದೆ.
ಏನನ್ನು ನಿರೀಕ್ಷಿಸಬಹುದು?
ರಾಷ್ಟ್ರ ಮೂರನೇ ಅಲೆಗೆ ಒಳಗಾಗುತ್ತಿರುವ ಬೆನ್ನಲ್ಲೆ ಓಮಿಕ್ರಾನ್ ವಿರುದ್ಧದ ಹೋರಾಟವನ್ನು ಸುಗಮಗೊಳಿಸುವ ಪ್ರಯತ್ನಗಳ ಮೇಲೆ ಸಭೆ ಕೇಂದ್ರೀಕರಿಸುವ ಸಾಧ್ಯತೆಯಿದೆ. ಸಭೆಯ ಸಮಯದಲ್ಲಿ, ಉದಯೋನ್ಮುಖ ಕೋವಿಡ್ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಪ್ರಧಾನ ಮಂತ್ರಿಯು ರಾಜ್ಯಗಳಿಗೆ ಹೇಳಬಹುದು.
ಇದಲ್ಲದೆ, ಓಮಿಕ್ರಾನ್ ರೂಪಾಂತರವು ಜಾಗತಿಕವಾಗಿ ಹರಡುವುದರಿಂದ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಜನರು ತಮ್ಮ ಕೆಲವು ರಜಾದಿನಗಳ ಯೋಜನೆಗಳನ್ನು ರದ್ದುಗೊಳಿಸಲು ಕೇಳಬಹುದು. ಗಮನಾರ್ಹವಾಗಿ, ವಿಶ್ವ ಆರೋಗ್ಯ ಸಂಸ್ಥೆ (WHO) ಅನೇಕ ದೇಶಗಳಲ್ಲಿ ರಜಾದಿನಗಳಲ್ಲಿ ಒಂದೆಡೆ ಸೇರುವ ಜನ ಸಂದಣಿಯಿಂದಾಗಿ ಪ್ರಕರಣಗಳು ಹೆಚ್ಚಾಗುತ್ತವೆ. ಇದರಿಂದ ಹೆಚ್ಚಿನ ಸಾವುಗಳು ಸಂಭವಕ್ಕೆ ಕಾರಣವಾಗುತ್ತದೆ ಎಂದು ಮೊದಲೇ ಎಚ್ಚರಿಸಿದೆ.
ರಾತ್ರಿ ಕರ್ಫ್ಯೂ ಹೇರುವುದು, ಸಾರ್ವಜನಿಕ ಸಭೆ, ಸಮಾರಂಭಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ, ಹೆಚ್ಚು ಪಾಸಿಟಿವ್ ವರದಿ ಬಂದಿರುವ ಜಿಲ್ಲೆಗಳಲ್ಲಿ ಮದುವೆಗಳ ಅತಿಥಿ ಸಂಖ್ಯೆಯನ್ನು ಮೊಟಕುಗೊಳಿಸುವುದು ಸೇರಿದಂತೆ ಕೆಲವು ನಿರ್ಬಂಧಗಳನ್ನು ವಿಧಿಸುವಂತೆ ಕೇಂದ್ರವು ಮಂಗಳವಾರದಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಳಿಕೊಂಡಿತ್ತು.
ಪ್ರಸ್ತುತ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ರೂಪಾಂತರ ವೈರಸ್ ಓಮಿಕ್ರಾನ್, ಡೆಲ್ಟಾ VOC ಗಿಂತ ಕನಿಷ್ಠ 3 ಪಟ್ಟು ಹೆಚ್ಚು ಹರಡುತ್ತದೆ. ಇದಲ್ಲದೆ ಡೆಲ್ಟಾ VOCಗಿಂತ ಇನ್ನೂ ದೇಶದ ವಿವಿಧ ಭಾಗಗಳಲ್ಲಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಕಟ್ಟುನಿಟ್ಟಾದ ಮತ್ತು ತ್ವರಿತ ನಿಯಂತ್ರಣ ಕ್ರಮದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ವಾರ್ ರೂಮ್‌ಗಳನ್ನು ಸಕ್ರಿಯಗೊಳಿಸಲು ಮತ್ತು ಜಿಲ್ಲೆ ಅಥವಾ ಸ್ಥಳೀಯ ಮಟ್ಟದಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳನ್ನು ಕೇಳಲಾಗಿದೆ.
ಭಾರತದಲ್ಲಿ ಓಮಿಕ್ರಾನ್
ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರದ ಗರಿಷ್ಠ 57 ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ 54, ತೆಲಂಗಾಣ 24, ಕರ್ನಾಟಕ 19, ರಾಜಸ್ಥಾನ 18, ಕೇರಳ 15 ಮತ್ತು ಗುಜರಾತ್ 14 ಪ್ರಕರಣಗಳು ದಾಖಲಾಗಿವೆ. WHO ಪ್ರಕಾರ, ಓಮಿಕ್ರಾನ್ ಈಗ 89 ದೇಶಗಳಲ್ಲಿ ವರದಿಯಾಗಿದೆ ಮತ್ತು ಇನ್ನೂ ಕೆಲ ಪ್ರದೇಶಗಳಲ್ಲಿ ಮೂರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. "ಹೊಸ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರವಾಗಿಲ್ಲ, ಆದರೆ ಬಹುಶಃ ಹೆಚ್ಚು ಸಾಂಕ್ರಾಮಿಕ ಮತ್ತು ಲಸಿಕೆಗಳಿಗೆ ನಿರೋಧಕವಾಗಿದೆ" ಎಂದು WHO ಹೇಳಿದೆ.
ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ತಮ್ಮ ರಜಾದಿನದ ಯೋಜನೆಗಳನ್ನು ರದ್ದುಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನರನ್ನು ಒತ್ತಾಯಿಸಿದೆ. "ರದ್ದಾದ ಈವೆಂಟ್ ನಿಮ್ಮ ಜೀವನಕ್ಕಿಂತ ಉತ್ತಮವಾದದ್ದಲ್ಲ" ಎಂದು WHO ಮುಖ್ಯಸ್ಥ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಜನ ಸೇರುವುದರಿಂದ ಕಷ್ಟಕರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಟ್ವೀಟ್‌ಗಳ ಸರಣಿಯಲ್ಲಿ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಲೋಕೋಪಕಾರಿ ಬಿಲ್ ಗೇಟ್ಸ್ ಅವರು ತಮ್ಮ ಆಪ್ತ ಸ್ನೇಹಿತರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗುತ್ತಿರುವುದರಿಂದ ಅವರು ತಮ್ಮ ಹೆಚ್ಚಿನ ರಜಾದಿನದ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದರು. ಓಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡುವುದರಿಂದ "ಸಾಂಕ್ರಾಮಿಕತೆಯ ಕೆಟ್ಟ ಭಾಗ ಪ್ರವೇಶಿಸಬಹುದು" ಎಂದು ಬಿಲ್ ಗೇಟ್ಸ್ ಎಚ್ಚರಿಸಿದ್ದಾರೆ.