ತಾಯಿಯೊರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆ

ತಾಯಿಯೊರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆ

ಹಳಿಯಾಳ: ತಾಯಿಯೊರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಕುರಿಗದ್ದಾ ಗ್ರಾಮದಲ್ಲಿ ನಡೆದಿದೆ.

ಅರುಣಾ ಗಣೇಶ ಸಾವಂತ ಹಾಗೂ ಈಕೆಯ ಮಕ್ಕಳಾದ 4 ವರ್ಷದ ಮಗಳು, 2 ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಾಗಿ ಕಾಣೆಯಾದವಳ ತಾಯಿ ಪುಷ್ಪಾ ಗೌಡರ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದಿ‌.8 ರಂದು ಮಧ್ಯಾಹ್ನ ಆಸ್ಪತ್ರೆಗೆ ಹೊಗಿ ಬರುವುದಾಗಿ ಹೇಳಿ ಹೊದವಳು ಈವರೆಗೆ ಬಾರದೆ ಕಾಣೆಯಾಗಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ‌. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಶೋಧ ಕಾರ್ಯ ಕೈಗೊಂಡಿದ್ದಾರೆ..