ಸಿದ್ದರಾಮಯ್ಯ ಮಾತಿಗೆ ಡಿಕೆಶಿ ಉತ್ತರಿಸಬೇಕು: ಸಚಿವ ಶಿವರಾಮ್ ಹೆಬ್ಬಾರ್

ಸಿದ್ದರಾಮಯ್ಯ ಮಾತಿಗೆ ಡಿಕೆಶಿ ಉತ್ತರಿಸಬೇಕು: ಸಚಿವ ಶಿವರಾಮ್ ಹೆಬ್ಬಾರ್

ಶಿರಸಿ: ಸಿದ್ದರಾಮಯ್ಯ ಅವರು ಏನೇನು‌ ಮಾತನಾಡುತ್ತಾರೆ ಎಂಬುದನ್ನು ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಕುರಿತು ಅನಗತ್ಯವಾಗಿ ಆಧಾರ ರಹಿತ‌ವಾಗಿ‌ ಕಾಂಗ್ರೆಸ್ ಆರೋಪ ಮಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.

ಉತ್ತರ ಕನ್ನಡದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಭಿನ್ನಾಭಿಪ್ರಾಯ ಇಲ್ಲದೇ ಅಭ್ಯರ್ಥಿ ಅಂತಿಮಗೊಳಿಸಲಿದ್ದಾರೆ. 23 ಜನ ಆಕಾಂಕ್ಷಿತರು ಇದ್ದರೂ ಪಕ್ಷ ಒಮ್ಮತದ ಅಭ್ಯರ್ಥಿ ನೀಡಲಿದೆ. 18ಕ್ಕೆ ಯಲ್ಲಾಪುರ ದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಯಾವುದೇ ಅಭ್ಯರ್ಥಿ ಘೋಷಣೆ ಆದರೂ ಗೆಲುವು ಬಿಜೆಪಿದ್ದೇ ಎಂದರು.

ಜಿಲ್ಲೆಯ ರಸ್ತೆಗಳ ಅಭಿವೃದ್ದಿ‌ ಮಳೆ‌ ಮುಗಿಯುತ್ತಿದ್ದಂತೆ ಮಾಡಲಾಗುತ್ತದೆ‌. 210 ಕೋ.ರೂ. ಬಿಡುಗಡೆ ಆಗಿದೆ. ಮಾಸಾಂತ್ಯದಲ್ಲಿ ಬೆಳೆ ವಿಮೆ ಕೂಡ ಬಿಡುಗಡೆ ಆಗಲಿದೆ ಎಂದರು.