ಎಂಎಸ್ ಧೋನಿ, ಅಭಿಷೇಕ್ ಬಚ್ಚನ್ ಪ್ಯಾನ್‌ ದುರ್ಬಳಕೆ: ಐವರು ಆರೋಪಿಗಳ ಬಂಧನ

ಎಂಎಸ್ ಧೋನಿ, ಅಭಿಷೇಕ್ ಬಚ್ಚನ್ ಪ್ಯಾನ್‌ ದುರ್ಬಳಕೆ: ಐವರು ಆರೋಪಿಗಳ ಬಂಧನ

ವದೆಹಲಿ: ಹಲವಾರು ಸೆಲೆಬ್ರಿಟಿಗಳ ಪ್ಯಾನ್ ವಿವರಗಳನ್ನು ಪಡೆದುಕೊಂಡು ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಪಡೆದ ಆರೋಪದ ಮೇಲೆ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಮತ್ತು ಎಂಎಸ್ ಧೋನಿ ಅವರ ಹೆಸರುಗಳು ಮತ್ತು ವಿವರಗಳನ್ನು ಬಳಸಲಾಗಿದೆ ಎಂದು ಶಹದಾರಾ ಡಿಸಿಪಿ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಬಳಸಿ ₹ 21.32 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಖರೀದಿಸಲಾಗಿದೆ ಎಂದು ವರದಿಯಾಗಿದೆ.

ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಹೆಸರುಗಳು ಮತ್ತು ವಿವರಗಳನ್ನು ವಂಚಕರು ಬಳಸಿದ್ದಾರೆ ಎಂದು ಶಹದ್ರಾ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರೋಹಿತ್ ಮೀನಾ ತಿಳಿಸಿದ್ದಾರೆ.

'ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ, ನಾವು ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ' ಎಂದು ಮೀನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರೋಪಿಗಳನ್ನು ಪುನೀತ್, ಮೊಹಮ್ಮದ್ ಆಸಿಫ್, ಸುನಿಲ್ ಕುಮಾರ್, ಪಂಕಜ್ ಮಿಶಾರ್ ಮತ್ತು ವಿಶ್ವ ಭಾಸ್ಕರ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.