ತನ್ನನ್ನು ತಾನೇ ಮದುವೆಯಾಗಲು ಹೊರಟಿದ್ದ ಯುವತಿಗೆ ಶಾಕ್.. ಯಾಕೆ ಗೊತ್ತಾ?

ತನ್ನನ್ನು ತಾನೇ ಮದುವೆಯಾಗಲು ಹೊರಟಿದ್ದ ಯುವತಿಗೆ ಶಾಕ್.. ಯಾಕೆ ಗೊತ್ತಾ?

ತನ್ನನ್ನು ತಾನೇ ಮದುವೆಯಾಗಲು ಮುಂದಾಗಿದ್ದ ಗುಜರಾತ್ ನ ಯುವತಿ ಕ್ಷಮಾ ಬಿಂದುಗೆ ಸಂಕಷ್ಟ ಎದುರಾಗಿದೆ. ಆಕೆ ವಡೋದರದ ಗೋತ್ರಿ ದೇವಸ್ಥಾನದಲ್ಲಿ ಜೂನ್ 11ರಂದು ಮದುವೆಯಾಗಲು ನಿರ್ಧರಿಸಿದ್ದಳು. ಆಮಂತ್ರಣ ಪತ್ರಿಕೆಯಲ್ಲೂ ದೇವಸ್ಥಾನದ ಹೆಸರನ್ನು ಹಾಕಿದ್ದಳು.

ಆದರೆ ಬಿಜೆಪಿ ಕಡೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆ, ಮದುವೆಗೆ ಅವಕಾಶ ನೀಡಲು ಗೋತ್ರಿ ದೇವಸ್ಥಾನ ಆಡಳಿತ ಸಮಿತಿ ನಿರಾಕರಿಸಿದೆ.

ಮತ್ತೊಂದೆಡೆ, ಆಕೆ ಯಾವುದೇ ದೇವಸ್ಥಾನದಲ್ಲಿ ಮದುವೆಯಾಗಲು ನಾವು ಬಿಡುವುದಿಲ್ಲ. ದೇವಸ್ಥಾನ ಹಿಂದೂ ಧರ್ಮದ ಪವಿತ್ರ ಜಾಗ. ಯುವತಿ ತನ್ನನ್ನು ತಾನೇ ಮದುವೆಯಾಗುವ ಮೂಲಕ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತಿದ್ದಾಳೆ. ಹಾಗಾಗಿ ಯಾವುದೇ ಕಾರಣಕ್ಕೆ ಆಕೆಯ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುವತಿ ಕ್ಷಮಾ ಬಿಂದು, ನನ್ನ ನಿರ್ಧಾರದ ಬಗ್ಗೆ ನಾನು ದೃಢವಾಗಿದ್ದೇನೆ. ನಾನು ಇಷ್ಟಪಟ್ಟು ಮಾಡುತ್ತಿರುವ ಕಾರ್ಯ. ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದಿದ್ದಾಳೆ. ಆಕೆ ಎಲ್ಲಿ ಮದುವೆಯಾಗುತ್ತಾಳೆ ಎಂಬುವುದು ಇನ್ನೂ ನಿಗೂಢವಾಗಿದೆ.