ಗಣಿ ಲೂಟಿ ಮಾಡಿ ಬಿಜೆಪಿಯನ್ನು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ತಂದ ರೆಡ್ಡಿಈಗ ಬೇಡ್ವಾ..?' : ಕಾಂಗ್ರೆಸ್ ವಾಗ್ದಾಳಿ

ಗಣಿ ಲೂಟಿ ಮಾಡಿ ಬಿಜೆಪಿಯನ್ನು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ತಂದ ರೆಡ್ಡಿಈಗ ಬೇಡ್ವಾ..?' : ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು : ನಿನ್ನೆ ಬಿಜೆಪಿಯೇ ನನಗೆ ಕಿರುಕುಳ ನೀಡುತ್ತಿರುವುದು ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ, ಆದರೆ ಇಂದು ರೆಡ್ಡಿ ಬಿಜೆಪಿ ಬಿಟ್ಟು ಹೋಗುವುದಾದರೆ ಹೋಗಲಿ ಎಂದು ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ, ಈಗ ರೆಡ್ಡಿ ಬಿಜೆಪಿಯವರಿಗೆ ಬೇಡವಾಗಿದ್ದಾರೆ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.

ಗಣಿ ಲೂಟಿ ಮಾಡಿ ಬಿಜೆಪಿಯನ್ನು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ತಂದ ರೆಡ್ಡಿಗಳು ಈಗ ಬಿಜೆಪಿಗೆ ಬೇಡವಾಗಿದ್ದಾರೆ. ಬಿಜೆಪಿ ಬಿಜೆಪಿ ನಡುವೆಯೇ ಜೋರಾಗಿ ಕದನ ನಡೆಯುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ನೀಡಿದೆ.

ಕಾಂಗ್ರೆಸ್ ನಾಯಕರಿಗಿಂತ ಬಿಜೆಪಿ ನಾಯಕರೇ ನನಗೆ ಹೆಚ್ಚು ಕಷ್ಟ ನೀಡುತ್ತಿದ್ದಾರೆ. ನನ್ನ ಮುಂದಿನ ರಾಜಕೀಯ ಜೀವನದ ಬಗ್ಗೆ ನನಗೆ ಗೊತ್ತಿಲ್ಲ, ಕಾಂಗ್ರೆಸ್ ಕೂಡ ನನಗೆ ಕಷ್ಟ ಕೊಟ್ಟಿದೆ. ಆದ್ರೆ ಬಿಜೆಪಿಯವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಇತ್ತೀಚೆಗೆ ಅಸಮಾಧಾನ ಹೊರ ಹಾಕಿದ್ದರು. ನಾನು ನವಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವ ಹಾಗೆ ಇಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನವೆಂಬರ್ 6ರ ಬಳಿಕ ಬಳ್ಳಾರಿ ಬಿಡಬೇಕು. ಆದ್ರೆ ನಾ ಬಳ್ಳಾರಿ ಬಿಟ್ಟು ಬೆಂಗಳೂರಿನಲ್ಲಿ ಇರಲ್ಲ. ಇಲ್ಲೇ ಆಸು ಪಾಸಿನಲ್ಲಿ ಇರುವೆ. ಮುಂದಿನ ದಿನ ನಾನು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಈ ವಿಚಾರದ ಕುರಿತು ಕಾಂಗ್ರೆಸ್ ಬಿಜೆಪಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದೆ.