ಶಿಷ್ಠಾಚಾರ ಪಾಲಿಸಿ ಇಲ್ಲವೇ 3ನೇ ಅಲೆಗೆ ʼಒಮಿಕ್ರಾನ್ʼ ಕಾರಣವಾಗ್ಬೋದು : IMA ಎಚ್ಚರಿಕೆ
ನವಹೆದಲಿ : ಭಾರತದಲ್ಲಿ ಕೋವಿಡ್-19ರ ಒಮಿಕ್ರಾನ್ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಭಾರತೀಯ ವೈದ್ಯಕೀಯ ಸಂಘ (IMA) ಮಂಗಳವಾರ ಮತ್ತೊಂದು ಸೋಂಕಿನ ಅಲೆಯ ಬಗ್ಗೆ ಎಚ್ಚರಿಕೆ ನೀಡಿದೆ. ಇನ್ನು ಆರೋಗ್ಯ ರಕ್ಷಣೆ, ಮುಂಚೂಣಿ ಕಾರ್ಯಕರ್ತರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ 'ಹೆಚ್ಚುವರಿ' ಡೋಸ್ʼಗಳನ್ನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.
12 ರಿಂದ 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಸಿಕೆ ಹಾಕುವ ಪ್ರಸ್ತಾಪವನ್ನ ಸರ್ಕಾರ ತ್ವರಿತಗೊಳಿಸಬೇಕೆಂದು ಐಎಂಎ ಕೋರಿದೆ. ಇನ್ನು ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಸ್ಪಷ್ಟವಾಗಿದೆ ಎಂದು ಹೇಳಿದ ಐಎಂಎ, 'ನಾವು ಸಾಕಷ್ಟು ಕ್ರಮಗಳನ್ನ ತೆಗೆದುಕೊಳ್ಳದಿದ್ದರೆ, ಬೃಹತ್ ಮೂರನೇ ಅಲೆ ಎದುರಿಬೇಕಾಬೋದು' ಎಂದು ಹೇಳಿದೆ.
ಲಭ್ಯವಿರುವ ವೈಜ್ಞಾನಿಕ ಪುರಾವೆಗಳು ಮತ್ತು ಮೂಲದ ದೇಶಗಳಲ್ಲಿ ಗಮನಿಸಿದ ಅನುಭವದೊಂದಿಗೆ, ಒಮಿಕ್ರಾನ್ ರೂಪಾಂತರವು ಹೆಚ್ಚಿನ ಪೆನೆಟ್ರೆಬಿಲಿಟಿಯನ್ನ ಹೊಂದಿದ್ದು, ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಐಎಂಎ ಹೇಳಿಕೊಂಡಿದೆ.
ಭಾರತವು 1.26 ಬಿಲಿಯನ್ ಡೋಸ್ʼಗಳನ್ನ ನೀಡಿದ್ದು, ಲಸಿಕೆಯು ತೀವ್ರ ಸ್ವರೂಪದ ಸೋಂಕನ್ನ ತಡೆಯುತ್ತದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದೆ.
'ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಆರೋಗ್ಯ ರಕ್ಷಣೆ, ಮುಂಚೂಣಿ ಕಾರ್ಯಕರ್ತರು ಮತ್ತು ರೋಗನಿರೋಧಕ ಶಕ್ತಿಹೊಂದಿರುವ ವ್ಯಕ್ತಿಗಳಿಗೆ ಹೆಚ್ಚುವರಿ ಡೋಸ್ (Vaccine) ನೀಡುವುದನ್ನ ಅಧಿಕೃತವಾಗಿ ಘೋಷಿಸುವಂತೆ ಐಎಂಎ ಸರ್ಕಾರಕ್ಕೆ ಮನವಿ ಮಾಡುತ್ತದೆ' ಎಂದು ವೈದ್ಯರ ಸಂಸ್ಥೆ ತಿಳಿಸಿದೆ.
ಇನ್ನು ಜನರು ಮಾಸ್ಕ್ ಧರಿಸುವುದು ಮತ್ತು ಕೈಗಳನ್ನ ತೊಳೆಯುವುದು ಸೇರಿದಂತೆ ಕೋವಿಡ್-ಸೂಕ್ತ ನಡವಳಿಕೆಗಳನ್ನ ಪಾಲಿಸಬೇಕು. ಇನ್ನು ಬೃಹತ್ ಸಾಮಾಜಿಕ ಸಭೆಗಳನ್ನ ನಡೆಸದಂತೆ ಎಚ್ಚರಿಕೆ ನೀಡಿದೆ.