ಐಪಿಎಲ್ 2023 ; 'ಡೆಲ್ಲಿ ಕ್ಯಾಪಿಟಲ್ಸ್'ಗೆ ಮರಳಿದ ಗಂಗೂಲಿ, 'ಬಿಸಿಸಿಐ ಮಾಜಿ ಅಧ್ಯಕ್ಷ'ನಿಗೆ ದೊಡ್ಡ ಜವಾಬ್ದಾರಿ
ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೇರಿಕೊಂಡಿದ್ದಾರೆ. ಫ್ರಾಂಚೈಸಿ ಈ ಬಾರಿ ಅವರಿಗೆ ದೊಡ್ಡ ಸ್ಥಾನವನ್ನು ನೀಡಿದ್ದು, ಗಂಗೂಲಿ ಫ್ರಾಂಚೈಸಿಯ ಮೂರು ತಂಡಗಳಿಗೆ ನಿರ್ದೇಶಕರಾಗಿರುತ್ತಾರೆ.
ಗಂಗೂಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕೆಲಸ ಮಾಡಿದ್ದರು. ಅದ್ರಂತೆ, ಗಂಗೂಲಿ 2019ರಲ್ಲಿ ತಂಡದ ಮಾರ್ಗದರ್ಶಕರಾಗಿದ್ದರು. ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಇಂಟರ್ನ್ಯಾಷನಲ್ ಲೀಗ್ ಟಿ20 ತಂಡ ದುಬೈ ಕ್ಯಾಪಿಟಲ್ಸ್ ಮತ್ತು ಎಸ್ಎ ಟಿ20 ತಂಡ ಪ್ರಿಟೋರಿಯಾ ಕ್ಯಾಪಿಟಲ್ಸ್ಗೆ ನಿರ್ದೇಶಕರಾಗಿದ್ದಾರೆ.