ತಜ್ಞರ ಜೊತೆಗೆ ಸಿಎಂ ಮಹತ್ವದ ಸಭೆ ಆರಂಭ : ಎಲ್ಲರ ಚಿತ್ತ ಸಿಎಂ ಸಭೆಯತ್ತ!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರು, ಸಚಿವರ ಜೊತೆಗೆ ಮಹತ್ವದ ಸಭೆ ಆರಂಭವಾಗಿದ್ದು, ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಆರೋಗ್ಯ ಸಚಿವ ಡಾ.ಕೆ.
ವೀಕೆಂಡ್ ಕರ್ಪ್ಯೂ ಬಗ್ಗೆ ವಿವಿಧ ಸಂಘ ಸಂಸ್ಥೆಗಳಲ್ಲದೆ ಬಿಜೆಪಿಯ ಹಿರಿಯ ನಾಯಕರಿಂದಲೂ ಅಪಸ್ವರ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಬಿಗಿ ಕ್ರಮಗಳೊಂದಿಗೆ ವೀಕೆಂಡ್ ಕರ್ಪ್ಯೂ ರದ್ದುಪಡಿಸುವ ಅಥವಾ ಸಡಿಲಗೊಳಿಸುವ ಸಾಧ್ಯತೆ ಇದೆ. ಜೊತೆಗೆ ಚಿತ್ರಮಂದಿರ ಬಂದ್ ಮಾಡಬೇಕೋ ಅಥವಾ ತೆರೆಯಬೇಕೋ ಎನ್ನು ಕುರಿತಂತೆ ಮತ್ತು ಶಾಲೆ-ಕಾಲೇಜುಗಳು ಪುನಾರಂಭದ ಬಗ್ಗೆಯೂ ನಿರ್ಧಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.