ರೂಪಾಯಿ ಕುರಿತ ನಿರ್ಮಲಾ ಹೇಳಿಕೆಯನ್ನು ಚಿದಂಬರಂ ಗೇಲಿ ಮಾಡಿದ್ದು ಹೀಗೆ...

ನವದೆಹಲಿ: ಭಾರತದ ರೂಪಾಯಿ ಕುಸಿಯುತ್ತಿಲ್ಲ, ಬದಲಾಗಿ ಅಮೆರಿಕ ಡಾಲರ್ ಮೌಲ್ಯವರ್ಧನೆಗೊಳ್ಳುತ್ತಿದೆ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯು ಈಗಾಗಲೇ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಗಿದೆ.
ಈಗ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರೂ ಸಚಿವೆ ನಿರ್ಮಲಾ ಅವರ ಹೇಳಿಕೆಯನ್ನು ತೀವ್ರ ಗೇಲಿ ಮಾಡಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು, 'ರೂಪಾಯಿ ದುರ್ಬಲವಾಗುತ್ತಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಅದು ಸಂಪೂರ್ಣವಾಗಿಯೂ ನಿಜ. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಥವಾ ಪಕ್ಷ ಯಾವಾಗಲೂ ಹೇಳೋದು ಏನು ಗೊತ್ತೆ? ನಾ
ಭಾನುವಾರ ಮಾಧ್ಯಮಗೋಷ್ಠಿಯೊಂದರಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು, 'ರೂಪಾಯಿ ಕುಸಿಯುತ್ತಿಲ್ಲ, ಬದಲಿಗೆ ಡಾಲರ್ ಬಲವರ್ಧನೆಗೊಳ್ಳುತ್ತಿದೆ' ಎಂದು ಹೇಳಿದ್ದರು.
ರೂಪಾಯಿ ಕುಸಿಯುತ್ತಿಲ್ಲ: ಡಾಲರ್ ಮೌಲ್ಯ ವೃದ್ಧಿಸುತ್ತಿದೆ-ನಿರ್ಮಲಾ ಸೀತಾರಾಮನ್
ಅವರ ಹೇಳಿಕೆಯ ವಿಡಿಯೊ ತುಣುಕು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವು ಚುನಾವಣೆಯಲ್ಲಿ ಸೋತಿಲ್ಲ ಆದರೆ ಇನ್ನೊಂದು ಪಕ್ಷ ಚುನಾವಣೆಯಲ್ಲಿ ಗೆದ್ದಿದೆ ಎನ್ನುತ್ತಾರೆ' ಎಂದು ಚಿದಂಬರಂ ಕುಹಕವಾಡಿದ್ದಾರೆ.