ಸಿದ್ದರಾಮಯ್ಯಗೆ ಅರಳು ಮರಳಾಗಿದೆ ಎಂದು ಲೇವಡಿ ಮಾಡಿದ ಬಿಜೆಪಿ ಶಾಸಕ ದೇಸಾಯಿ

ಸಿದ್ದರಾಮಯ್ಯ ಅವರೆ ನಿಮಗೆ ಅರಳು ಮರಳು ಆಗಿದೆ. ಅಧಿವೇಶನದಲ್ಲಿ ನಿಮ್ಮ ಪಂಚೆ ಕಳದಿದ್ದು ನಿಮ್ಗೆ ಗೊತ್ತಿಲ್ವೆ, ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಲೇವಡಿ ಮಾಡಿದ್ದಾರೆ.
Vo1 ಮಾಜಿ ಸಿಎಂ
ಯಡಿಯೂರಪ್ಪಗೆ ವಯಸ್ಸಾಗಿದೆ, ಹಾಲಿ ಸಿಎಂ ಬೊಮ್ಮಾಯಿಗೆ ಕುಂಟುತ್ತಿರಿ ಅಂತ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಟೀಕಿಸಿರುವ
ಕುರಿತು ಧಾರವಾಡದಲ್ಲಿ ನಡೆದ ಬಿಜೆಪಿ
ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯಿಸಿದ್ದಾರೆ. ಈ ಕ್ಷೆತ್ರಕ್ಕೆ ಬಿಜೆಪಿ ಸರ್ಕಾರ 1400 ಕೋಟಿ ಅನುದಾನ ನೀಡಿದೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ.
ಈ ಸಿದ್ದರಾಮಯ್ಯ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡುವಂತೆ ಶಾಸಕರು ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರು ನನ್ನ ಕೈ ಬಿಟ್ಟಿಲ್ಲ, ಅವರಿಗಾಗಿ ನಾನು ಹಗಲಿರುಳು ಶ್ರಮಿಸಲು ಸಿದ್ಧ ಎಂದು ಕಾರ್ಯಕರ್ತರಿಗೆ ಅಭಯ ಹಸ್ತ ನೀಡಿದರು. ಇದೆ ವೇಳೆ
ಚುಣಾವಣೆಯ ರಣ ಕಹಳೆ ಮೊಳಗಿಸಿ ಕಾರ್ಯಕರ್ತರಿಗೆ ಸಜ್ಜಾಗುವಂತೆ ಕರೆ ನೀಡಿದರು.