ಪ್ರೇಮಿಗಳ ವಿಡಿಯೋ ಮಾಡಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟವರು ಅಂದರ್

ಹೊಸಕೋಟೆ

ಕಾರಿನಲ್ಲಿ ಲಾಂಗ್ ಡ್ರೈವ್ ಬಂದಿದ್ದ ಬೆಂಗಳೂರು ಹೂಡಿ ಮೂಲದ ಇಬ್ಬರು ಪ್ರೇಮಿಗಳು ಹೊಸಕೋಟೆ ತಾಲೂಕಿನ ಹಂದೇನಹಳ್ಳಿಯ ಖಾಸಗಿ ಬಡಾವಣೆಯಲ್ಲಿ ಇವರಿಬ್ಬರ ಮೇಲೆ ದೌರ್ಜನ್ಯ ಎಸಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ ಐವರು ಪುಂಡರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಂದನಹಳ್ಳಿಯ ಆಶಿಪ್, ನವಾಜ್ ಪಾಷಾ, ಲಿಯಾಕತ್ ಪಾಷಾ, ಸಲ್ಮಾನ್ ಖಾನ್, ರೀಹಿದ್ ಬಂಧಿತ ಆರೋಪಿಗಳು. ಪ್ರೇಮಿಗಳಿಬ್ಬರು ಕಾರಿನಲ್ಲಿ ಏಕಾಂತವಾಗಿದ್ದ ವೇಳೆ ಬೈಕ್ನಲ್ಲಿ ಬಂದ ಪುಂಡರು ಯುವಕ ಯುವತಿಯ ವಿಡಿಯೋ ಮಾಡಿ ದೌರ್ಜನ್ಯ ಎಸಗಿ ೫ ಲಕ್ಷ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಸ್ಥಳೀಯರು ಆಗಮಿಸಿದ ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದರು. ಕಳೆದ ೨೫ ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ