ಖಾಸಗಿ ಗೂಡ್ಸ್ ಕಚೇರಿಗಳ ಮೇಲೆ ವಾಣಿಜ್ಯ ತೆರಿಗರ ಇಲಾಖೆ ಅಧಿಕಾರಿಗಳ ದಾಳಿ.
ಹುಬ್ಬಳ್ಳಿ
ಖಾಸಗಿ ಟ್ರಾವೆಲ್ಸ್ ಗಳ ಗೂಡ್ಸ್ ಗಳ ಕಚೇರಿ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಇಂದು ಬೆಳಂಬೆಳಗ್ಗೆ
ದಿಢೀರ್ ದಾಳಿ ಮಾಡಿ ತಪಾಸಣೆ ನಡೆಸಿದರು.
ಜಂಟಿ ಆಯುಕ್ತ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಲ್ಲಿನ ಕಾಟನ್ ಮಾರ್ಕೆಟ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿರುವ 10 ಕ್ಕೂ ಹೆಚ್ಚು ಖಾಸಗಿ ಟ್ರಾವೆಲ್ಸ್ ಗಳ ಗೂಡ್ಸ್ ತಪಾಸಣೆ ನಡೆಸಿದರು.
ಅಕ್ರಮವಾಗಿ ಗೂಡ್ಸ್ ಸಾಗಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಯಿತು.