ಮಹಿಳಾ ಸಮೃದ್ಧಿ ಸಂತೃಪ್ತಿ - 2 : ಮಹಿಳಾ ಯಶೋಗಾಥೆಗಳ ರಾಷ್ಟ್ರೀಯ ಸಮಾವೇಶ
ಧಾರವಾಡದ ರಾಯಪುರದ ಎಸ್ ಕೆಡಿಆರ್ ಡಿಪಿಯಲ್ಲಿರುವ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ಮಹಿಳಾ ಸಮೃದ್ಧಿ ಸಂತೃಪ್ತಿ-2 ಮಹಿಳಾ ಯಶೋಗಾಥೆಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಹಿಳಾ ಸೌರ ಉದ್ಯಮಿಗಳು, ಮಾರಾಟ ಪ್ರತಿನಿಧಿಗಳು ಹಾಗೂ ಸೇವಾಬಂಧುಗಳ ಅನುಭವ ಮತ್ತು ಅನಿಸಿಕೆಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ಕೆಡಿಆರ್ ಡಿಪಿಯ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ, ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮೋಹನ ಭಾಸ್ಕರ ಹೆಗಡೆ, ಸೆಲ್ಕೋ ಸಂಸ್ಥಾಪಕರು ಹಾಗೂ ರಾಮೋನ್ ಮಾಗ್ಸೆಸ್ಸೆ ಪುರಸ್ಕೃತರಾದ ಡಾ, ಹರೀಶ್ ಹಂದೆ, ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮಹಾ ಪ್ರಬಂಧಕರಾದ ಭಾಗ್ಯರೇಖಾ, ಐಕೆಇಎ ಫೌಂಡೇಶನ್ ನ ಯೋಲಾಂಡಾ ವ್ಯಾನ್ ಗಿಂಕೆಲ್, ಸೆಲ್ಕೋ ಫೌಂಡೇಷನ್ ನ ನಿರ್ದೇಶಕರಾದ ಹುದಾ ಜಾಫರ್ ಹಾಗೂ ಸಹಾಯಕ ನಿರ್ದೇಶಕರಾದ ರಚಿತಾ ಮಿಶ್ರಾ ಹಾಜರಿದ್ದರು.