ಯುದ್ಧದ ನಡುವೆಯೂ ಜಗತ್ತನ್ನು ಕಾಪಾಡಿದ್ದ ಭಾರತ ಇನ್ನು ಯೂಕ್ರೇನಿನಲ್ಲಿ ಶಾಂತಿ ತರಲಿದೆಯಾ

ಯುದ್ಧದ ನಡುವೆಯೂ ಜಗತ್ತನ್ನು ಕಾಪಾಡಿದ್ದ ಭಾರತ ಇನ್ನು ಯೂಕ್ರೇನಿನಲ್ಲಿ ಶಾಂತಿ ತರಲಿದೆಯಾ

ವದೆಹಲಿ: ರಷ್ಯಾ ಯೂಕ್ರೇನ್​ ಯುದ್ಧದ ಕೆಲವು ವಿಚಾರಗಳಲ್ಲಿ ಪದೇ ಪದೇ ಭಾರತ ರಷ್ಯಾವನ್ನು ತಡೆಯುತ್ತಿದೆ. ಈಗ ಭಾರತ, ಯೂಕ್ರೇನ್​ ಯುದ್ಧವನ್ನು ನಿಲ್ಲಿಸಲಿದೆಯಾ ಎನ್ನುವ ಪ್ರಶ್ನೆ ಜಗತ್ತನ್ನು ಕಾಡುತ್ತಿದೆ.

ಇತ್ತೀಚೆಗೆ ರಷ್ಯಾ, ಯೂಕ್ರೇನಿನಲ್ಲಿ ಬೆಳೆದ ಗೋಧಿಯ ಸಾಗಾಟವನ್ನು ತಡೆದಿತ್ತು.

ಇದರಿಂದಾಗಿ ಜಗತ್ತಿನಾದ್ಯಂತ ಗೋಧಿ ಬೆಲೆ ಹೆಚ್ಚಾಗಿತ್ತು. ಆಗ ಭಾರತ ಗೋಧಿ ತುಂಬಿದ ಹಡಗುಗಳಿಗೆ ಹೋಗಲು ಅನುವು ಮಾಡುವಂತೆ ರಷ್ಯಾ ಮನವೊಲಿಸಿತ್ತು. ಅದಾದ ಮೇಲೆ ರಷ್ಯಾ ಝಾಪೊರಿಜಿಯಾ ಎನ್ನುವ ಅಣು ಶಕ್ತಿ ಸ್ಥಾವರದ ಮೇಲೆ ಬಾಂಬ್​ ದಾಳಿ ಮಾಡದಂತೆ ಭಾರತ ತಡೆದಿತ್ತು. ಹೀಗೆ ಯೂಕ್ರೇನ್ ಯುದ್ಧದ ಉದ್ದಕ್ಕೂ ಪ್ರಮುಖ ಕ್ಷಣಗಳಲ್ಲಿ ಭಾರತ ಸದ್ದಿಲ್ಲದೆ ಕೆಲಸ ಮಾಡಿದೆ.

ಈ ವಾರ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್​, ಆರ್ಥಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಮಾಸ್ಕೋಗೆ ಹೋಗಲಿದ್ದಾರೆ. ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಸ್ನೇಹಿತನಾಗಿರುವ ಭಾರತ, ಯುದ್ಧ ನಿಲ್ಲಿಸುವ ಬಗ್ಗೆ ಮಾತನಾಡಲಿದೆಯೆ ಎಂಬ ಪ್ರಶ್ನೆ ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿದೆ.(ಏಜೆನ್ಸೀಸ್​)