ಏರ್‌ಶೋ ಅಗ್ನಿ ದುರಂತದಲ್ಲಿ ಕಾರು ಭಸ್ಮ: ಹೊಸ ಕಾರು ಖರೀದಿಗೆ ಪರಿಹಾರ ಕೋರಿದ್ದ ಅರ್ಜಿ ವಜಾ

ಬೆಂಗಳೂರು : ಯಲಹಂಕ ವಾಯು ನೆಲೆ ಬಳಿ 2019ರ ವೈಮಾನಿಕ ಪ್ರದರ್ಶನದ ವೇಳೆ ನಡೆದ ಆಗ್ನಿ ಆಕಸ್ಮಿಕದಲ್ಲಿ ಕಾರು ಕಳೆದುಕೊಂಡ ವ್ಯಕ್ತಿ ತನಗೆ ಹೊಸ ಕಾರು ಖರೀದಿಸಲು ರಕ್ಷಣಾ ಸಚಿವಾಲಯದಿಂದ ಪರಿಹಾರ ಕೊಡಿಸಬೇಕೆಂದು ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರದ ಗ್ರಾಹಕರ ನ್ಯಾಯಾಲಯ ವಜಾಗೊಳಿಸಿದೆ.
ಬೆಂಗಳೂರಿನ ಬಿ. ಸಿ. ಗೌತಮ್ ಎಂಬುವವರು ಸಲ್ಲಿಸಿದ್ದ ದೂರನ್ನು ಆಲಿಸಿದ ಗ್ರಾಹಕರ ಆಯೋಗದ ಅಧ್ಯಕ್ಷ ಕೆ. ಎಸ್. ಬೀಳಗಿ ಅವರಿದ್ದ ನ್ಯಾಯಾಲಯ ಈ ಆದೇಶ ನೀಡಿದೆ.
ಏರ್ ಶೋ ನಡೆಯುವ ಜಾಗದಲ್ಲಿ ಭಾರತೀಯ ವಾಯು ಪಡೆ ಅಗ್ನಿ ಸುರಕ್ಷತೆಯನ್ನು ನಿರ್ವಹಿಸುತ್ತಿತ್ತು. ಹೊರಗಿನ ಅಗ್ನಿ ಸುರಕ್ಷತೆ ಜವಾಬ್ದಾರಿ ರಾಜ್ಯ ಸರಕಾರಕ್ಕೆ ಸೇರಿದ್ದಾಗಿತ್ತು. ಆದರೆ ಅಗ್ನಿ ಅವಘಡ ಸಂಭವಿಸಿರುವುದು ಏರ್ ಶೋ ನಡೆಯುತ್ತಿದ್ದ ಜಾಗದ ಹೊರಗೆ. ಹಾಗಾಗಿ ಅದಕ್ಕೆ ರಕ್ಷಣಾ ಇಲಾಖೆ ಜವಾಬ್ದಾರಿಯಲ್ಲ. ಅದು ಪರಿಹಾರ ನೀಡಬೇಕಾಗಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. ಹೊಸ ವಾಹನ ಖರೀದಿಗಾಗಿ ಹಣ ಮರು ಪಾವತಿ ಮಾಡಬೇಕಿಲ್ಲ ಎಂದು ನ್ಯಾಯಾಲಯ ಹೇಳಿದೆ.
'ಏರ್ ಶೋ ನಡೆಯುವ ಜಾಗದಲ್ಲಿ ಭಾರತೀಯ ವಾಯು ಪಡೆ ಅಗ್ನಿ ಸುರಕ್ಷತೆಯನ್ನು ನಿರ್ವಹಿಸುತ್ತಿತ್ತು. ಹೊರಗಿನ ಅಗ್ನಿ ಸುರಕ್ಷತೆ ಜವಾಬ್ದಾರಿ ರಾಜ್ಯ ಸರಕಾರಕ್ಕೆ ಸೇರಿದ್ದಾಗಿತ್ತು. ಆದರೆ ಅಗ್ನಿ ಅವಘಡ ಸಂಭವಿಸಿರುವುದು ಏರ್ ಶೋ ನಡೆಯುತ್ತಿದ್ದ ಜಾಗದ ಹೊರಗೆ. ಹಾಗಾಗಿ ಅದಕ್ಕೆ ರಕ್ಷಣಾ ಇಲಾಖೆ ಜವಾಬ್ದಾರಿಯಲ್ಲ. ಅದು ಪರಿಹಾರ ನೀಡಬೇಕಾಗಿಲ್ಲ' ಎಂದು ಆದೇಶಿಸಿದೆ.