ಎಚ್‍ಐವಿ ಪಾಸಿಟಿವ್ ಶಿಕ್ಷಕನಿಗೆ ಸುಧೀರ್ಘ ರಜೆ ಶಿಕ್ಷೆ!
ಕೊಲ್ಕತ್ತಾ: ಬುದ್ಧಿಮಾಂದ್ಯ ಮತ್ತು ಕಲಿಕಾ ಸಮಸ್ಯೆ ಇರುವ ಮಕ್ಕಳ ಶಾಲೆಯ ಶಿಕ್ಷಕರೊಬ್ಬರು ಎಚ್‍ಐವಿ ಪಾಸಿಟಿವ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಸುಧೀರ್ಘ ರಜೆ ಮೇಲೆ ತೆರಳುವಂತೆ ಶಾಲಾ ಆಡಳಿತ ಮಂಡಳಿ ಸೂಚಿಸಿದ ಘಟನೆ ವರದಿಯಾಗಿದೆ.
ಎಚ್‍ಐವಿ ಪಾಸಿಟಿವ್ ಹೊಂದಿರುವ ಶಿಕ್ಷಕ ವಿದ್ಯಾರ್ಥಿಗಳಿಗೆ ಸೋಂಕು ಹರಡಬಹುದು ಎಂಬ ಭೀತಿಯಿಂದ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ.
34 ವರ್ಷ ವಯಸ್ಸಿನ ಶಿಕ್ಷಕನಿಗೆ ಎಚ್‍ಐವಿ ಸೋಂಕು ಇರುವುದು ಕಳೆದ ವಾರವಷ್ಟೇ ತಿಳಿದು ಬಂದಿದೆ ಎಂದು ವಸತಿಯುತ ಶಾಲೆಯ ಅಧಿಕಾರಿಗಳು ಹೇಳಿದ್ದಾರೆ.