ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರಿಗೆ ಸೋಲು ಮತ್ತೆ ಕಣ್ಣೀರಿಟ್ಟ ಹೆಚ್‌ಡಿ ಕುಮಾರ ಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರಿಗೆ ಸೋಲು ಮತ್ತೆ ಕಣ್ಣೀರಿಟ್ಟ ಹೆಚ್‌ಡಿ ಕುಮಾರ ಸ್ವಾಮಿ

ತುಮಕೂರು: ಲೋಕಸಭಾ ಚುನಾವಣೆ ಸೋಲು ನೆನಪು ಮಾಡಿಕೊಂಡು ಮಾಜಿ ಸಿಂ ಹೆಚ್‌ ಡಿ ಕುಮಾರ ಸ್ವಾಮಿಯವರು ಕಣ್ಣೀರಿಟ್ಟ ಘಟನೆ ಇಂದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ ನಡೆದಿದೆ.

ಅವರು ಇಂದು ತಿಪಟೂರು ನಗರದಲ್ಲಿ ನಡೆದ ಜೆಡಿಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಇದೇ ವೇಳೆ ಅವರು ತುಮಕೂರು ಲೋಕಸಭೆಯಿಂದ ಸ್ಪರ್ಧೆ ಮಾಡಿದ್ದ ಮಾಜಿ ಪಿಎಂ ಹೆಚ್‌ಡಿ ದೇವೇಗೌಡರ ಸೋಲನ್ನು ನೆನಪು ಮಾಡಿಕೊಂಡು ಕಣ್ಣಿರಿಟ್ಟರು.

ಇದೇ ವೇಳೆ ಅವರು ಚುನಾವಣೆ ವೇಳೆಯಲ್ಲಿ ನೀರಾವರಿ ಸಲುವಾಗಿ ಇಲ್ಲ ಸಲ್ಲದ ಅಪಪ್ರಚಾರವನ್ನು ಮಾಡಲಾಯಿತು. ನಮ್ಮ ಕುಟುಂಬದ ವಿರುದ್ದ ಕೂಡ ಸುಳ್ಳು ಮಾಹಿತಿಗಳು ಹರಿದಾಡಿದವು. ಇದಲ್ಲದೇ ಹೇಮಾವತಿ ಜಲಾಯಶದ ನಿರ್ವಹಣೆಯಲ್ಲಿ ಹೆಚ್‌ಡಿಡಿಯವರ ಪಾತ್ರವು ಕೂಡ ಇದೇ, ಇದಲ್ಲದೇ ತುಮಕೂರು ಟಿಎಂಸಿ ನೀರು ಕೂಡ ಬರುತ್ತಿದೆ. ಅವರು ಎದ್ದು ಓಡಾಡಲು ಕೂಡ ಅಗುತ್ತಿಲ್ಲ. ಲೋಕಸಭೆ ಸೋಲು ದೇವೇಗೌಡರ ಮನಸ್ಸಿನ ಮೇಲೆ ಆಘಾತವನ್ನು ಉಂಟು ಮಾಡಿದೆ ಅಂತ ಅವರು ಕಣ್ಣಿರಿಟ್ಟರು. ಅಂಗವಿಕಲರು, ಅಶಕ್ತರಿಗಾಗಿ ನಾನು ಸಿಎಂ ಆಗಬೇಕು, ನಿತ್ಯ ಬಡ ತಾಯಂದಿರು ನಮ್ಮ ನೋವನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದಾರೆ. ನಾವು ಮಣ್ಣಿನ ಮಕ್ಕಳು, ಅದರಲ್ಲೆ ಬದುಕ ಬೇಕು, ನಾನು ಸಿನಿಮಾ ವಿತರಕನಾಗಿದ್ದ ವೇಳೇಯಲ್ಲಿ ಬಂದ ಹಣದಿಂದ ನಾನು ನಲವತ್ತು ಎಕರೆ ಹೊಲವನ್ನು ಖರೀದಿ ಮಾಡಿದೆ. ರಾಜಕೀಯದಿಂದ ನಾನು ಹಣವನ್ನು ಮಾಡಿಲ್ಲ ಅಂತ ಹೇಳಿದ ಅವರು ನಿಮ್ಮಿಂದ ಕನಿಕರವನ್ನು ಪಡೆದುಕೊಳ್ಳುವುದಕ್ಕೆ ನಾನು ಕಣ್ಣಿರು ಹಾಕುತ್ತಿಲ್ಲ ಅಂತ ತಿಳಿಸಿದರು.

ಫೋಟೋ ಸಂಗ್ರಹ ಚಿತ್ರ: