ರಾಜಧಾನಿಗೆ ಮೋದಿ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಹೊಸ ಮಾರ್ಗ ಹೀಗಿದೆ

ರಾಜಧಾನಿಗೆ ಮೋದಿ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಹೊಸ ಮಾರ್ಗ ಹೀಗಿದೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಳೆ ಭಾನುವಾರ ಬೆಂಗಳೂರಿಗೆ  ಆಗಮಿಸುತ್ತಿದ್ದು, ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಫೆಬ್ರವರಿ 5 ರಿಂದ 8 ರವರೆಗೆ ಮೂರು ದಿನ ಕಾರ್ಯಕ್ರಮ ನಡೆಯಲಿದ್ದು, ನಾಳೆ ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ಗಣ್ಯರ ಅಗಮಿಸುವ ನಿರೀಕ್ಷೆಗಳಿವೆ.
ಇದರ ಜೊತೆ ಪ್ರಧಾನಿಗಳ ಭದ್ರತೆ ಹಿನ್ನೆಲೆ ಬೆಂಗಳೂರಿನ ಸಂಚಾರ (Bengaluru Traffic) ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿಶೇಷವಾಗಿ ಬೆಂಗಳೂರು - ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಫೆಬ್ರವರಿ 5, 6, 7 ರಂದು ಬೆಂಗಳೂರು ನಗರದೊಳಗೆ ಎಲ್ಲಾ ರೀತಿಯ ಲಘು, ಮಧ್ಯಮ ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಯಾವ ಮಾರ್ಗದಲ್ಲಿ ಸಂಚಾರ ನಿರ್ಬಂಧ?

*ತುಮಕೂರು ರಸ್ತೆಯಿಂದ ಬೆಂಗಳೂರು ನಗರದೊಳಗೆ ಸರಕು ಸಾಗಣೆ ವಾಹನಗಳ ನಿರ್ಬಂಧ

*ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಮತ್ತು ಸೋಮನಹಳ್ಳಿಯವರೆಗೆ

*ಬಳ್ಳಾರಿ ರಸ್ತೆಯಿಂದ ಬೆಂಗಳೂರು ನಗರದೊಳಗೆ

*ಹೊಸಕೋಟೆ ರಸ್ತೆಯಿಂದ ಹೆಬ್ಬಾಳವರೆಗೆ

ಮೂರು ದಿನ ಬಾರಿ ಸರಕು ಸಾಗಣೆ ವಾಹನಗಳಿಗೆ ಬದಲಿ ಮಾರ್ಗ ಹೀಗಿದೆ

*ತುಮಕೂರು ಕಡೆಯಿಂದ ಬಳ್ಳಾರಿ ರಸ್ತೆ, ಹೈದರಾಬಾದ್ ಕಡೆಗೆ ಸಂಚರಿಸುವ ವಾಹನಗಳು ಡಾಬಸ್ ಪೇಟೆಯಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ಕಡೆ ಸಂಚರಿಸಬೇಕು.

*ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಸೊಂಡೆಕೊಪ್ಪ ಕ್ರಾಸ್ ನಲ್ಲಿ ಬಲ ತಿರುವು ಪಡೆದು ತಾವರೆಕೆರೆ ಮುಖಾಂತರ ಮಾಗಡಿ ರಸ್ತೆಗೆ ಸಂಪರ್ಕ ಪಡೆದು ಆ ಮೂಲಕ ನೈಸ್ ರಸ್ತೆ ತಲುಪಿ ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸಬೇಕು.

*ಬಳ್ಳಾರಿ ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ದೇವನಹಳ್ಳಿ ಬಲ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆಯ ಮೂಲಕ ತುಮಕೂರು ಕಡೆಗೆ ಸಂಪರ್ಕ ಪಡೆಯುವುದು.

*ಹೊಸಕೋಟೆಯಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಬೂದಿಗೆರೆ ಕ್ರಾಸ್ ಮುಖಾಂತರ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ಡಾಬಸ್ ಪೇಟೆ ಮೂಲಕ ತುಮಕೂರು ಕಡೆ ಸಂಚಾರ.


18.82 ಉದ್ದದ ಈ ಕಾರಿಡಾರ್ 16 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ನೀಡಲಿದೆ. ಈ ಭಾಗದ ನಾಗರಿಕರು ನಮ್ಮ ಮೆಟ್ರೋ ಸೇವೆಯನ್ನು ಬಳಸಿಕೊಂಡು ತಮ್ಮ ಪ್ರಯಾಣ ಮಾಡಬಹುದಾಗಿದೆ.
ಬೆಂಗಳೂರು ನಮ್ಮ ಮೆಟ್ರೋ 2023ರಲ್ಲಿ 30.09 ಕಿಲೋ ಮೀಟರ್ ವಿಸ್ತರಣೆ ಆಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವಲ್ಲಿ ಈ ವಿಸ್ತರಣೆ ಪ್ರಮುಖ ಪಾತ್ರ ವಹಿಸಲಿದೆ.

ನಮ್ಮ ಮೆಟ್ರೋದಲ್ಲಿ ಈ ವರ್ಷ 3 ಮಾರ್ಗಗಳು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿವೆ.ಅಲ್ಲದೇ ವೈಟ್​ಫೀಲ್ಡ್ ಮಾರ್ಗ ಮಾರ್ಚ್ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ.

ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿಗೆ 450 ಕೋಟಿ

ಕೇಂದ್ರ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನಿಡಲಾಗಿದೆ. ಜೊತೆಗೆ ಬೆಂಗಳೂರಿಗೂ ಬಂಪರ್ ಅನುದಾನ ಒದಗಿಸಲಾಗಿದೆ ಎಂಬ ಅಂಶ ಇದೀಗ ವರದಿಯಾಗಿದೆ. .
ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಕೇಂದ್ರ ಬಜೆಟ್​ನಲ್ಲಿ ಬರೋಬ್ಬರಿ ₹ 450 ಕೋಟಿ ಅನುದಾನವನ್ನು ಮೀಸಲಿಡುವುದಾಗಿ ಅವರು ಘೋಷಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2023 ರಲ್ಲಿ, ಬೆಂಗಳೂರಿನಲ್ಲಿ ಮಹತ್ವದ ಹಂಚಿಕೆಯನ್ನು ಪಡೆದಿರುವ ಯೋಜನೆಯು ಬಹು ನಿರೀಕ್ಷಿತ ಬೆಂಗಳೂರು ಉಪನಗರ ರೈಲ್ವೆ ಯೋಜನೆ (BSRP) ಆಗಿದೆ.