ಕೇಸರಿ ಬಣ್ಣವನ್ನು ಸರ್ಕಾರ ಸೂಕ್ತ ಕೆಲಸಕ್ಕೆ ಬಳಸುತ್ತಿದೆ - ಚಕ್ರವರ್ತಿ ಸೂಲಿಬೆಲೆ

ಕೇಸರಿ ಬಣ್ಣವನ್ನು ಸರ್ಕಾರ ಸೂಕ್ತ ಕೆಲಸಕ್ಕೆ ಬಳಸುತ್ತಿದೆ - ಚಕ್ರವರ್ತಿ ಸೂಲಿಬೆಲೆ

ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚಲು ಸರ್ಕಾರ ಮುಂದಾಗಿದ್ದು, ನಮ್ಮ ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣವನ್ನು ಸರ್ಕಾರ ಸೂಕ್ತ ಕೆಲಸಕ್ಕೆ ಬಳಸುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚುವ ವಿಚಾರವಾಗಿ ಧಾರವಾಡದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಣ್ಣಗಳನ್ನು ಸರಿಯಾಗಿ ಬಳಸಿಕೊಂಡರೆ ಅದು ತಪ್ಪಲ್ಲ. ಸರ್ಕಾರಿ ಶಾಲೆಗಳಿಗೆ ಹಿಂದುತ್ವದ ಛಾಯೇ ಕೊಡುವ ಸರ್ಕಾರದ ಪರಿಕಲ್ಪನೆಯನ್ನು ಪ್ರತಿ ಪಕ್ಷಗಳು ವಿರೋಧಿಸುತ್ತಿವೆ. ಕೇಸರಿ ಬಣ್ಣವೆಂದರೆ ಪ್ರತಿ ಪಕ್ಷಗಳಿಗೆ ಅಸಡ್ಡೆಯಾಗಿದೆ ಎಂದು ಕಿಡಿ ಕಾರಿದರು.

ಜಗತ್ತಿಗೆ ಭಾರತವನ್ನು ತೋರಿಸಿಕೊಟ್ಟ ಶ್ರೇಷ್ಠ ವ್ಯಕ್ತಿ ಸ್ವಾಮಿ ವಿವೇಕಾನಂದರು. ಕೇಸರಿ ಬಣ್ಣದ ಮೇಲೆ ಇರುವ ಆಕ್ರೋಶವನ್ನು ಪ್ರತಿಪಕ್ಷಗಳು, ವಿವೇಕಾನಂದರ ಫೋಟೋ ಮೇಲೆ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಸ್ವಾಮಿ ವಿವೇಕಾನಂದರು, ಶಿವಾಜಿ ಮಹಾರಾಜರು, ಅರವಿಂದರು ಸೇರಿದಂತೆ ಈ ನಾಡಿನ ಏಳಿಗೆಗೆ ಶ್ರಮಿಸಿದ ಮಹನೀಯರ ಫೋಟೋಗಳನ್ನು ಶಾಲೆಗಳಲ್ಲಿ ಇಡುವುದು ಅವಶ್ಯವಾಗಿದೆ. ಶಾಲಾ ಮಕ್ಕಳಿಗೆ ಈ ಮಹನೀಯರ ಪರಿಚಯವಾಗಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.