ಗುಡ್ಡಾಪುರ ದಾನಮ್ಮ ದೇವಿ ಜಾತ್ರೆ ಸಂಭ್ರಮ; ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತರು

ಗುಡ್ಡಾಪುರ ದಾನಮ್ಮ ದೇವಿ ಜಾತ್ರೆ ಸಂಭ್ರಮ; ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತರು

ವಿಜಯಪುರ: ಪ್ರತಿ ವರ್ಷ ಛಟ್ಟಿ ಅಮವಾಸ್ಯೆಯಂದು ಶ್ರೀಕ್ಷೇತ್ರ ಗುಡ್ಡಾಪುರ ಕ್ಷೇತ್ರದಲ್ಲಿ ದಾನಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಇಂದು (ನ.23) ನಸುಕಿನ ಜಾವದಿಂದ ಗುಡ್ಡಾಪುರದಲ್ಲಿ ಜಾತ್ರೆ ಆರಂಭವಾಗಿದ್ದು, ದಾನಮ್ಮ ದೇವಿ ನಾಮಸ್ಮರಣೆ ಮಾಡುತ್ತಾ ಗುಡ್ಡಾಪುರದತ್ತ ಭಕ್ತರು ಹೆಜ್ಜೆ ಹಾಕುತ್ತಿದ್ದಾರೆ. ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ರಾಜ್ಯದ ಗಡಿ ವಿವಾದ ಮುಗಿಯುವವರೆಗೂ ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್‌‌ ಮಾಡಲಾಗಿದೆ.