ಕರ್ನಾಟಕ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಪ್ರಕಾಶ್‌‌ ಅಮ್ಮಣ್ಣಾಯ

ಕರ್ನಾಟಕ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಪ್ರಕಾಶ್‌‌ ಅಮ್ಮಣ್ಣಾಯ

ಬೆಂಗಳೂರು: 2023ರ ಎಪ್ರಿಲ್‌‌ ನಂತರ ಕರ್ನಾಟಕದಲ್ಲಿ ಚುನಾವಣೆ ನಡೆದಲ್ಲಿ ಹೊಸಬರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿಸುವಂಥ ರಾಜಕೀಯ ಪಕ್ಷಗಳು ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್‌‌ ಅಮ್ಮಣ್ಣಾಯ ಹೇಳಿದ್ದಾರೆ. ಶೋಭಕೃತ್‌ ಸಂವತ್ಸರದಲ್ಲಿ ಬುಧ ರಾಜ & ಬುಧನೇ ಮಂತ್ರಿ ಸಹ ಆಗಿರುತ್ತಾನೆ. ಬುಧ ಅಂದರೆ, ಯುವರಾಜ. ಆದ್ದರಿಂದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸುವವರಿಗೆ ಹೆಚ್ಚಿನ ಜಯ ದೊರೆಯಲಿದೆ ಎಂದಿದ್ದಾರೆ.