ಕುತೂಹಲ ಮೂಡಿಸಿದ ಅಜಿತ್ ಚಿತ್ರ; 'ತುನಿವು' ಮೂರನೇ ಪೋಸ್ಟರ್ ಬಂತು

ಕುತೂಹಲ ಮೂಡಿಸಿದ ಅಜಿತ್ ಚಿತ್ರ; 'ತುನಿವು' ಮೂರನೇ ಪೋಸ್ಟರ್ ಬಂತು

ಬಹು ನಿರೀಕ್ಷಿತ ಕಾಲಿವುಡ್ ಚಿತ್ರ, ಅಜಿತ್ ನಟನೆಯ 'ತುನಿವು' ತೆರೆಗೆ ಬರಲು ಸಜ್ಜಾಗಿದೆ. ಎಚ್.ನಿನೋತ್ ನಿರ್ದೇಶನದ ಈ ಚಿತ್ರ ಪೊಂಗಲ್ ಪ್ರಯುಕ್ತ 2023ರ ಜನವರಿ 12ರಂದು ಬಿಡುಗಡೆಯಾಗಲಿದೆ. ಸದ್ಯ ಚಿತ್ರ ತಂಡ ಸಿನೆಮಾದ ಮೂರನೇ ಪೋಸ್ಟರ್ ಬಿಡುಗಡೆ ಮಾಡಿದೆ. ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಇದು ಪಂಜಾಬ್ ಬ್ಯಾಂಕ್ ದರೋಡೆಯ ಕಥೆಯನ್ನಾಧರಿಸಿದೆ. ಅಜಿತ್ ಗೆ ಮಾಲಿವುಡ್ ನ ಸೂಪರ್ ಸ್ಟಾರ್ ಮಂಜು ವಾರಿಯರ್ ನಾಯಕಿಯಾಗಿದ್ದು, ಸಮುದ್ರಖನಿ, ವೀರ, ಅಜಯ್, ಚಿಬಿ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ