ಅಫ್ಘಾನಿಸ್ತಾನದಿಂದ ಭಾರತೀಯ ಅಧಿಕಾರಿಗಳ ಎರಡನೇ ತಂಡ ಏರ್‌ಲಿಫ್ಟ್

ಅಫ್ಘಾನಿಸ್ತಾನದಿಂದ ಭಾರತೀಯ ಅಧಿಕಾರಿಗಳ ಎರಡನೇ ತಂಡ ಏರ್‌ಲಿಫ್ಟ್
ನವದೆಹಲಿ : ೨೪ ಗಂಟೆಗಳ ಕಾಲ ನಡೆದ ಮಾತುಕತೆಯ ನಂತರ, ಭಾರತೀಯ ವಾಯುಪಡೆಯ ಸಿ-೧೭ ಹೆವಿ-ಲಿಫ್ಟ್ ವಿಮಾನವನ್ನು ಬಳಸಿಕೊಂಡು ಕಾಬೂಲ್ ನಿಂದ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ಎರಡನೇ ತಂಡವನ್ನು ದೇಶಕ್ಕೆ ಸ್ಥಳಾಂತರಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಐಎಎಫ್ ವಿಮಾನವು ಬೆಳಿಗ್ಗೆ ೮ ಗಂಟೆ ಸುಮಾರಿಗೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಿಂದ ಎಟಿಸಿಯನ್ನು ನಿರ್ವಹಿಸುತ್ತಿರುವ ಅಮೆರಿಕ ಪಡೆಗಳ ಸಹಾಯದಿಂದ ಮೇಲಕ್ಕೆ ಹಾರಿತು. ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಹಾಗೂ ಇತರ ೧೨೦ ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ವಿಮಾನದಲ್ಲಿದ್ದಾರೆ.
ವಿಮಾನ ಎಲ್ಲಾ ಸ್ಥಳಾಂತರಗೊAಡವರೊAದಿಗೆ ಸಿ-೧೭ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಭಾರತೀಯ ವಾಯುಪ್ರದೇಶಕ್ಕೆ ದಾಟುತ್ತದೆ ಮತ್ತು ಜಾಮ್ ನಗರದಲ್ಲಿ ಇಳಿಯುತ್ತದೆ ಎಂದು ತಿಳಿದು ಬಂದಿದೆ.