ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿಗಳ ಬೆಲೆ; ಗ್ರಾಹಕರು ಕಂಗಾಲು, ಇಲ್ಲಿದೆ ದರಪಟ್ಟಿ

ಬೆಂಗಳೂರು : ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಸಂಪೂರ್ಣ ಜಲಾವೃತವಾಗಿತ್ತು. ಇನ್ನೇನು ಫಸಲು ಕೈಗೆ ಸಿಗಬೇಕು ಅನ್ನುವಷ್ಟರಲ್ಲಿ ನಿರಂತರ ಮಳೆಗೆ ನಾಶವಾಯಿತು. ಸುರಿದ ಮಳೆಯಿಂದ ರೈತರ ಬದುಕು ಸದ್ಯ ಹೀನಾಯವಾಗಿದೆ.
ತರಕಾರಿ ಬೆಲೆ ಕೇಳಿದರೆ ಶಾಕ್ ಆಗುತ್ತೆ. ತರಕಾರಿಗಳ ಬೆಲೆ ಮತ್ತೆ ಶತಕ ದಾಟಿದೆ. ತರಕಾರಿಗಳು ದರ ಏರಿಕೆಯಲ್ಲಿ ಪೈಪೋಟಿ ಬೆಳೆಸಿದೆ. ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ರಾಜ್ಯದ ಜನರು ಇದೇ ಸ್ಥಿತಿಯನ್ನು ಎದುರಿಸಬೇಕಾಗಿದೆ.
ಕನಿಷ್ಠ 2-3 ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಕುಸಿದಿದ್ದ ಟೊಮ್ಯಾಟೋ ದರ ಸೇರಿ ಇತರೆ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ. ನುಗ್ಗೆಕಾಯಿ ಪ್ರತಿ ಕೆಜಿಗೆ 350 ರೂ. ಇದೆ. ಮಾರುಕಟ್ಟೆಯಲ್ಲಿ ದರ ಕೇಳಿ ಜನರು ತರಕಾರಿ ಕೊಳ್ಳದೆ ವಾಪಸ್ ಹೋಗುತ್ತಿದ್ದಾರೆ.
ತರಕಾರಿಗಳ ದರ ಹೀಗಿದೆ
ಒಂದು ಕೆಜಿ ನುಗ್ಗೆಕಾಯಿಗೆ 200 ರಿಂದ 360 ರೂ. ಇದೆ.
ಟೊಮ್ಯಾಟೋ 60 ರಿಂದ 100 ರೂ.
ಈರುಳ್ಳಿ 40 ರಿಂದ 50 ರೂ.
ಬೆಂಡೆಕಾಯಿ 60 ರಿಂದ 100 ರೂ.
ಬೀನ್ಸ್ 60 ರಿಂದ 100 ರೂ.
ಕ್ಯಾರೆಟ್ 70 ರಿಂದ 90 ರೂ.
ಹೀರೆಕಾಯಿ 50 ರಿಂದ 85 ರೂ.
ಬೀಟ್ರೂಟ್ 40 ರಿಂದ 75 ರೂ.
ನಮಿಲು ಕೋಸು 40 ರಿಂದ 100 ರೂ.
ಬದನೆಕಾಯಿ 30 ರಿಂದ 114 ರೂ.
ಕೊತ್ತಂಬರಿ ಸೊಪ್ಪು 30 ರಿಂದ 40 ರೂ. ಇದೆ. ಇನ್ನು ಮೆಂತ್ಯ, ಪಾಲಕ್, ಅರವೆ, ದಂಟಿನ ಸೊಪ್ಪು ಪ್ರತಿ ಕಟ್ಟಿಗೆ 60 ರಿಂದ 70 ರೂಪಾಯಿ ಇದೆ.