ಹೈಟೆಕ್ ಸೋಲಾರ್ ಶೀತಲ ಘಟಕ ಉದ್ಘಾಟಿಸಿದ ಶಾಸಕ ಅಮೃತ ದೇಸಾಯಿ.
ಧಾರವಾಡ.
ಹೈಟೆಕ್ ಸೋಲಾರ್ ಶೀತಲ ಘಟಕವನ್ನು ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಶಾಸಕ ಅಮೃತ ದೇಸಾಯಿ ಉದ್ಘಾಟನೆ ನೇರವರಿಸಿದ್ರು. ರೈತರು ಬೆಳೆದು ತಂದ ತರಕಾರಿ, ಹಣ್ಣು, ಹೂವು ಹಾಗೂ ಸೋಪ್ಪು ಗಳನ್ನು ಶೇಖರಣೆ ಮಾಡಲು ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಸೇಲ್ಕೋ ಫೌಂಡೇಶನ್, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಪರಂಪರಾ ಫಾರ್ಮರ್ ಪ್ರೋಡ್ಯೂಸರ್ ಕಂ. ಲಿಮಿಟೆಡ್ ಸಹಯೋಗದಲ್ಲಿ ಈ ಹೈ ಟೆಕ್ ಕೋಲ್ಡ ಸ್ಟೋರೇಜ್ ಘಟಕ ಸ್ಥಾಪನೆ ಮಾಡಲಾಗಿದ್ದು. ರೈತರು ಸುಮಾರು 5 ರಿಂದ 6 ದಿನಗಳ ಕಾಲ ತರಕಾರಿ, ಹಣ್ಣು, ಹೂವು ಹಾಗೂ ಸೋಪ್ಪು ಶೇಖರಣೆ ಮಾಡಬಹುದಾಗಿದ್ದು ರೈತರ ಅನುಕೂಲಕ್ಕಾಗಿ ಈ ಘಟಕ ಸ್ಥಾಪನೆ ಮಾಡಲಾಗಿದೆ ಎಂದರು.