ಕರಾವಳಿಗೆ ಘಟಾನುಘಟಿಗಳ ನಿರೀಕ್ಷೆ : ಮೇ 6, 7ರಂದು ಮೋದಿ, ಯೋಗಿ ಭೇಟಿ ಸಾಧ್ಯತೆ

ಕರಾವಳಿಗೆ ಘಟಾನುಘಟಿಗಳ ನಿರೀಕ್ಷೆ : ಮೇ 6, 7ರಂದು ಮೋದಿ, ಯೋಗಿ ಭೇಟಿ ಸಾಧ್ಯತೆ

ಡುಪಿ: ವಿಧಾನಸಭೆ ಚುನಾವಣೆಯ ಪ್ರಚಾರ ಕ್ಕಾಗಿ ಕರಾವಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಘಟಾನು ಘಟಿ ಗಳು ಮೇ ತಿಂಗಳಲ್ಲಿ ಆಗಮಿಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೇ 6 ಅಥವಾ 7ರಂದು ಕರಾವಳಿಗೆ ಬರುವ ಸಾಧ್ಯತೆ ಇದೆ.

ಇವರಲ್ಲಿ ಒಬ್ಬರು ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಮತ್ತೂಬ್ಬರು ಉಡುಪಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಎರಡೂ ಕಾರ್ಯಕ್ರಮಗಳು ಜಿಲ್ಲಾ ಕೇಂದ್ರದಲ್ಲಿ ನಡೆಯಲಿವೆ ಎನ್ನಲಾಗುತ್ತಿದೆ.

ಅಲ್ಲದೇ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ನೇತೃತ್ವದಲ್ಲಿ ತಲಾ 20ರಂತೆ ರಾಜ್ಯದ ಒಟ್ಟು 80 ಕಡೆ ಬೃಹತ್‌ ರ್ಯಾಲಿಗಳು ನಡೆಯಲಿವೆ. ಕಾಂಗ್ರೆಸ್‌ ಪಕ್ಷದಿಂದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಪ್ರಚಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಸ್ಥಳ ಮತ್ತು ದಿನಾಂಕಗಳು ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.