ಕೊನೆಗೂ ಮದುವೆಯಾಗುತ್ತೇನೆ ಎಂದ ರಾಹುಲ್ ಗಾಂಧಿ, ಹುಡುಗಿ ಬಗ್ಗೆ ಹೀಗಂದ್ರು

ನವದೆಹಲಿ, ಜನವರಿ 23: ಭಾರತ್ ಜೋಡೋ ಯಾತ್ರೆಯನ್ನು ಮುಗಿಸುವ ಹಂತದಲ್ಲಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೊನೆಗೂ ತಾವು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಮುಂದುವರೆದು ಮದುವೆಯಾಗುವ ಹುಡುಗಿಯ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸದ್ಯ ಜಮ್ಮು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರಿಯಾದ ಹುಡುಗಿ ಸಿಕ್ಕಾಗ ಮದುವೆಯಾಗುತ್ತೇನೆ ಎಂದು ಕರ್ಲಿ ಟೇಲ್ಸ್ ಯೂಟೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.52 ವರ್ಷ ಪ್ರಯಾದ ರಾಹುಲ್ ಗಾಂಧಿ ಅವರು ಭಾರತದ ಅತ್ಯಂತ ಮೋಸ್ಟ್ ವಾಟೆಂಡ್ ಬ್ಯಾಚುಲರ್‌ಗಳ ಪಟ್ಟಿಯಲ್ಲಿ ಇದ್ದಾರೆ. ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಮದುವೆಯ ಕುರಿತಾದ ಪ್ರಶ್ನೆಗಳಿಗೆ ನಗುತ್ತಾ ಉತ್ತರವನ್ನು ನೀಡಿದ್ದಾರೆ. ಕರ್ಲಿ ಟೇಲ್ಸ್‌ಗೆ ನೀಡಿದ ಸಂದರ್ಶನದಲ್ಲಿ ವೈನಾಡು ಸಂಸದರೂ ಆಗಿರುವ ರಾಹುಲ್ ಗಾಂಧಿ ತಮಗೆ ತಕ್ಕನಾದ ಹುಡುಗಿಯ ಹುಡುಕಾಟದಲ್ಲಿ ಇರುವುದಾಗಿಯೂ, ಸೂಕ್ತ ಹುಡುಗಿ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ.