ಬಾಂಗ್ಲಾ ವಿಮೋಚನಾ ಯುದ್ಧದ ವಿಜಯೋತ್ಸವದ 50ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡ ಹುಧಾ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ
ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮೋಚನೆ ಗೊಳಿಸಿದ ಯುದ್ಧದ ವಿಜಯೋತ್ಸವದ 50ನೇ ವರ್ಷಚಾರಣೆಯ ಅಂಗವಾಗಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಭಾಗವಹಿಸಿ, ಯುದ್ಧದಲ್ಲಿ ಮಡಿದ ವೀರ ಸೇನಾನಿಗಳಿಗೆ ಗೌರವ ನಮನಗಳನ್ನು ಸಲ್ಲಿಸಿದರು. .
ಇದೇ ಸಂದರ್ಭದಲ್ಲಿ ವೀರ ಸೇನಾನಿ ವಸಂತ ಲಾಡ್ ರವರ ಪತ್ನಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಅಮಿನಗಡ ರವರು, ಕೊಪ್ಪದ್ ರವರು, ವಸಂತ ಅರ್ಕಾಚಾರಿ, ಚಿಕ್ಕಮಠರವರು ಹಾಗೂ ವೀರ ಸೇನಾನಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.